
ಮಸೀದಿಗಳು ಧಾರ್ಮಿಕ ಶ್ರದ್ಧಾಕೇಂದ್ರ ಮಾತ್ರವಲ್ಲದೆ, ಸಮುದಾಯದ ಆರೋಗ್ಯ ಕಾಪಾಡುವ ಸೇವೆಗೂ ನೆಲೆಯಾಗಿದೆ.
ಹೈದರಾಬಾದಿನ ರಾಜೇಂದ್ರನಗರ ಮಂಡಲದಲ್ಲಿ ಇರುವ ಮೊಹಮ್ಮದ್-ಇ-ಮುಸ್ತಫಾ ಮಸೀದಿಯಲ್ಲಿ ಹೆಲ್ಪಿಂಗ್ ಹ್ಯಾಂಡ್ ಫೌಂಡೇಶನ್ ಎಂಬ ಎನ್ ಜಿ ಒ ಸಮುದಾಯ ಆರೋಗ್ಯ ಕೇಂದ್ರ ಆರಂಭಿಸಿದೆ.
ಸುತ್ತಮುತ್ತಲು ಇರುವ ಕೊಳೆಗೇರಿಯಲ್ಲಿನ 5 ಲಕ್ಷ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಅಲ್ಲೇ ಹತ್ತಿರದಲ್ಲಿರುವ ಮಸೀದಿಯಲ್ಲಿ ಆರೋಗ್ಯ ಕೇಂದ್ರ ಸ್ಥಾಪಿಸಲು ಸ್ಥಳಾವಕಾಶ ಮಾಡಿಕೊಡಲಾಗಿದೆ. ಮಹಿಳೆ ಮತ್ತು ಮಕ್ಕಳ ಆರೋಗ್ಯ ಕೇಂದ್ರವೂ ಇದರಲ್ಲಿ ಇರಲಿದೆ.