
ಸಾಕಷ್ಟು ಬಾರಿ ಜೀವನದಲ್ಲಿ ಸಕಾರಾತ್ಮದ ಸ್ಪೂರ್ತಿಯಲ್ಲಿರಬೇಕಾದಲ್ಲಿ ಸಣ್ಣ ಪುಟ್ಟ ಸಂತೋಷಗಳನ್ನು ಪಡೆದುಕೊಳ್ಳುವುದರತ್ತ ಗಮನ ಕೊಡುವುದು ಎಷ್ಟು ಮುಖ್ಯ ಎಂದು ಬಹಳಷ್ಟು ಬಾರಿ ಕೇಳಿದ್ದೇವೆ.
“ನನಗೆ ಖಾಲಿ ಬುಕ್‌ಶಾಪ್‌ಗಳು ಇಷ್ಟ ಆಗುತ್ತವೆ. ನಿಶ್ಯಬ್ದವಾದ ಕಾಫಿ ಶಾಪ್‌ಗಳು ಇಷ್ಟ. ಮಳೆಗಾಲದ ದಿನಗಳು ಹಾಗೂ ಸಿಡಿಲಬ್ಬರಗಳನ್ನು ಕೇಳಲು ಇಷ್ಟ ಪಡುತ್ತೇವೆ. ನನಗೆ ಕದಡಿದ ಹಾಸಿಗೆಗಳು ಹಾಗೂ ಹರಿದ ಶೂಗಳು ಇಷ್ಟವಾಗುತ್ತವೆ. ಇಂಥ ಸಣ್ಣಪುಟ್ಟ ಸಂತಸಗಳು ತರುವ ಖುಷಿ ನನಗೆ ಇಷ್ಟವಾಗುತ್ತವೆ” ಎಂದು ಉದ್ಯಮಿ ಹರ್ಷ್ ಗೊಯೇಂಕಾ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಜೀವನದ ಸಣ್ಣ ಪುಟ್ಟ ಸಂತಸಗಳನ್ನು ಅರಿತು ಖುಷಿ ಪಡುವುದನ್ನು ಕಲಿತಲ್ಲಿ ಜೀವನವು ಸಂತಸಮಯವಾಗಿರುತ್ತದೆ ಎಂಬರ್ಥದ ಈ ಟ್ವೀಟ್‌ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಜನರು ತಮ್ಮ ಜೀವನದ ಇಂಥ ಸಣ್ಣ ಪುಟ್ಟ ಸಂತಸದ ಕ್ಷಣಗಳ ಬಗ್ಗೆ ಹಂಚಿಕೊಂಡಿದ್ದಾರೆ.
https://twitter.com/KPadmaRan1/status/1292046682171924480?ref_src=twsrc%5Etfw%7Ctwcamp%5Etweetembed%7Ctwterm%5E1292046682171924480%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fharsh-goenkas-latest-tweet-prompts-netizens-to-tweet-about-the-simple-joys-in-life%2F634194