ಸತತ ದೂರುಗಳಿಗೆ ಪ್ರತಿಕ್ರಿಯಿಸಿದ ರಾಜಸ್ಥಾನದ ಬಾರ್ಮೆರ್ ಜಿಲ್ಲೆಯ ಉಪವಿಭಾಗದ ಮ್ಯಾಜಿಸ್ಟ್ರೇಟ್ ಕುಸುಮ್ಲತಾ ಅವರು 30 ಹಾಸಿಗೆಗಳ ಸಾಮರ್ಥ್ಯದ ನಕಲಿ ಆಸ್ಪತ್ರೆಯೊಂದಕ್ಕೆ ಬೀಗ ಜಡಿದಿದ್ದಾರೆ.
ಜಿಲ್ಲೆಯ ಸಿವಾನಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕುಸೀಪ್ ಗ್ರಾಮದಲ್ಲಿ ಈ ನಕಲಿ ಆಸ್ಪತ್ರೆಯನ್ನು ನಡೆಸಲಾಗುತ್ತಿದೆ ಎಂಬ ದೂರು ಸ್ವೀಕರಿಸಿದ ಮ್ಯಾಜಿಸ್ಟ್ರೇಟ್, ಕಾರ್ಯಪ್ರವೃತ್ತರಾಗಿದ್ದಾರೆ.
ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆ ಮಾಡಿಕೊಂಡು, 30-35 ಹಾಸಿಗೆಗಳ ಈ ಆಸ್ಪತ್ರೆ ನಡೆಸಿಕೊಂಡು ಹೋಗುತ್ತಿದ್ದ ನಕಲಿ ವೈದ್ಯರಿಂದ ಜನರ ಜೀವಗಳಿಗೆ ಕುತ್ತು ಬಂದಿತ್ತು ಎಂದು ಕುಸುಮ್ಲತಾ ತಿಳಿಸಿದ್ದಾರೆ. ಈ ಆಸ್ಪತ್ರೆಯಲ್ಲಿ ಆಮ್ಲಜನಕದ ಸಿಲಿಂಡರ್‌ಗಳು ಸಹ ಸಿಕ್ಕಿವೆ.
ರಾತ್ರಿ ಪತಿ ಬಂದಾಗ ಪ್ರಿಯಕರನೊಂದಿಗಿದ್ದ ಪತ್ನಿ: ಆಕ್ರೋಶಗೊಂಡು ಘೋರ ಕೃತ್ಯ
ರಾಜೇಂದರ್ ಸಿಂಗ್ ಸೋಲಂಕಿ ಹೆಸರಿನ ಈ ವ್ಯಕ್ತಿ ಮ್ಯಾಜಿಸ್ಟ್ರೇಟ್ ರೇಡ್ ಆಗುವ ಸಂದರ್ಭದಲ್ಲಿ ಕೋವಿಡ್ ರೋಗಿಗಳಿಗೆ ಶುಶ್ರೂಷೆ ಮಾಡುತ್ತಿದ್ದರು. ತಾವು ವೈದ್ಯರಾಗಿದ್ದು, ಇದಕ್ಕೆ ಪುಷ್ಟೀಕರಿಸಲು ತಮ್ಮಲ್ಲಿ ಪದವಿ ಹಾಗೂ ಪರವಾನಿಗೆ ಇರುವುದಾಗಿ ಸೋಲಂಕಿ ಈ ವೇಳೆ ವಾದವನ್ನೂ ಮಾಡಿದ್ದಾರೆ.
ಇದೇ ವೇಳೆ ಮ್ಯಾಜಿಸ್ಟ್ರೇಟ್ ಜೊತೆಗೆ ಅನುಚಿತವಾಗಿ ವರ್ತಿಸಲು ಮುಂದಾದ ಸೋಲಂಕಿ ವಿರುದ್ಧ ಪೊಲೀಸ್‌ಗೆ ದೂರು ಕೊಡಲಾಗಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.