ಖ್ಯಾತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ರ ಪ್ರಸಿದ್ಧ ಹಾಡುಗಳಲ್ಲಿ ಒಂದಾದ ಮಾ ತುಜೆ ಸಲಾಂ ಹಾಡನ್ನ 4 ವರ್ಷದ ಪೋರಿಯೊಬ್ಬಳು ಹಾಡುವ ಮೂಲಕ ನೆಟ್ಟಿಗರ ಹೃದಯ ಕದ್ದಿದ್ದಾಳೆ.
ಮಿಜೋರಾಂನ ಲುಂಗ್ಲೆ ಜಿಲ್ಲೆಯ ನಾಲ್ಕು ವರ್ಷದ ಪ್ರಿಸ್ಕೂಲ್ ಎಸ್ತರ್ ಹಮ್ಟೆ ಎಂಬ 4 ವರ್ಷದ ಬಾಲಕಿ ಈ ಹಾಡನ್ನ ಹಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ. ರಾಷ್ಟ್ರ ಧ್ವಜವನ್ನ ಕೈಯಲ್ಲಿ ಹಿಡಿದುಕೊಂಡು ಮುದ್ದು ಮುದ್ಧಾಗಿ ಹಾಡ್ತಿರುವ ಬಾಲಕಿಗೆ ಪ್ರತಿಭೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಅಂದಹಾಗೆ ಈ ಪುಟಾಣಿಗೆ ತನ್ನ ಮಾತೃಭಾಷೆ ಮಿಜೋ ಬಿಟ್ಟರೆ ಇನ್ಯಾವ ಭಾಷೆಯನ್ನೂ ಮಾತನಾಡಲು ಬರಲ್ಲ. ಆದರೆ ಹಾಡಿನ ವಿಚಾರಕ್ಕೆ ಬಂದರೆ ಆಕೆ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯ ಹಾಡುಗಳನ್ನ ಸುಲಲಿತವಾಗಿ ಹಾಡಬಲ್ಲಳು.
ಈ ಬಾಲಕಿ ಯೂಟ್ಯೂಬ್ನಲ್ಲಿ ತನ್ನದೇ ಆದ ಖಾತೆಯನ್ನ ಹೊಂದಿದ್ದಾಳೆ. ಖಾತೆ ತೆರೆದ ಇನ್ನೂ ವರ್ಷ ಕಳೆದಿಲ್ಲ. ಆಗಲೇ 57000ಕ್ಕೂ ಹೆಚ್ಚು ಚಂದಾದಾರರನ್ನ ಗಳಿಸಿಕೊಂಡಿದ್ದಾಳೆ.