ಕೊರೋನಾ ಸಾಂಕ್ರಾಮಿಕ ರೋಗವು ಹಿರಿಯ ಜೀವಿಗಳ ಜೀವಕ್ಕೆ ಸಂಚಕಾರ ಒಡ್ಡುತ್ತಿದೆ ಎಂಬ ವಾದವಿದೆ. ಆದರೆ ನೋಯ್ಡಾದಲ್ಲಿ 94 ವರ್ಷದ ವೃದ್ಧರೊಬ್ಬರು ಕೊರೋನಾವನ್ನು ಸೋಲಿಸಿ ಪ್ರೇರೇಪಣೆ ನೀಡುವ ಸಂದೇಶವನ್ನು ಕಳಿಸಿದ್ದಾರೆ.
60 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಅಪಾಯಕಾರಿ ಎಂದು ವೈದ್ಯರು ಜಗತ್ತಿನಾದ್ಯಂತ ವಾದ ಮಾಡುತ್ತಿದ್ದಾರೆ, ಈ ನಡುವೆ ಆಗಿಂದಾಗ್ಗೆ ವೃದ್ಧರು ಕೊರೋನಾ ಜಯಿಸುತ್ತಿರುವುದು ಕಂಡುಬರುತ್ತಿದೆ.
ಕಳೆದ ತಿಂಗಳು ಮುಕ್ತಾರ್ ಎಂಬ 106 ವರ್ಷದ ವೃದ್ಧರು ಚೇತರಿಸಿಕೊಂಡಿದ್ದರು, ಇದೀಗ ಉತ್ತರಪ್ರದೇಶದ ಗೌತಮಬುದ್ಧ ನಗರದ 94 ವರ್ಷದ ವ್ಯಕ್ತಿಯೊಬ್ಬರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೊರೊನಾ ಕಾಣಿಸಿಕೊಂಡ ದ 94 ವರ್ಷದ ನಿವಾಸಿ ಅಲ್ಲಿನ ಶಾರದಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಚಿಕಿತ್ಸೆ ಫಲಕಾರಿಯಾಗಿದೆ.
ನೀವು ಅನೇಕರಿಗೆ ಸ್ಪೂರ್ತಿಯಾಗಿದ್ದೀರಿ, ನಮಗೆ ಇನ್ನಷ್ಟು ಕಠಿಣವಾಗಿ ಕೆಲಸ ಮಾಡಲು ಪ್ರೇರೇಪಿಸಿದ್ದೀರಿ, ನೀವು ಇನ್ನಷ್ಟು ಆರೋಗ್ಯಕರ ಜೀವನದಿಂದಿರಲು ಬಯಸುತ್ತೇವೆ ಎಂದು ಆಸ್ಪತ್ರೆಯ ವೈದ್ಯ ಸುಹಾಸ್ ಲಾಲಿನಾಕೆರೆ ಯತಿರಾಜ್ ಹೇಳಿದ್ದಾರೆ.