ಕರೊನಾದಿಂದ ನಾವು ಪಾರಾದ್ರೆ ಸಾಕು ಎಂದು ಹೆದರಿಕೊಂಡು ಬದುಕ್ತಾ ಇರೋ ಈ ಕಾಲದಲ್ಲಿ ವೃದ್ಧನೊಬ್ಬ ತನ್ನ ಬೆನ್ನು ನೋವಿನ ಸಮಸ್ಯೆ ನಡುವೆಯೂ ರಸ್ತೆಯಲ್ಲಿನ ಗಿಡಗಳಿಗೆ ನೀರು ಹಾಕೋ ಮೂಲಕ ನೆಟ್ಟಿಗರ ಮನ ಗೆದ್ದಿದ್ದಾರೆ.
ಗುರಗಾಂವ್ ನ ಬರೋಬ್ಬರಿ 91 ವರ್ಷದ ವೃದ್ಧ ಪ್ರತಿನಿತ್ಯ ರಸ್ತೆಯ ಬದಿಯ ಗಿಡಗಳಿಗೆ ನೀರುಣಿಸ್ತಾರಂತೆ. ವಿಪರೀತ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಾ ಇದ್ದರೂ ಕೂಡ ಮುಂಜಾನೆ 4 ಗಂಟೆಗೇ ಎದ್ದು ಈ ಕೆಲಸ ಮಾಡೋದನ್ನ ಮಾತ್ರ ಈ ವೃದ್ಧ ಮರೆಯಲ್ವಂತೆ.
ಐಎಎಸ್ ಅಧಿಕಾರಿ ನಿತೀನ್ ಸಂಘ್ವಾನ್ ವೃದ್ಧನ ಈ ವಿಡಿಯೋ ಶೇರ್ ಮಾಡಿ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. 91ರ ಇಳಿವಯಸ್ಸಿನಲ್ಲೂ ವೃದ್ಧನ ಪರಿಸರ ಪ್ರೇಮ ಕಂಡು ಯುವಕರು ತಲೆಬಾಗಿದ್ದಾರೆ.