’ಬಾಬಾ ಕಾ ಢಾಬಾ’ ಮಾಡಿದ ಮೋಡಿಯ ಬಳಿಕ ದೇಶವಾಸಿಗಳಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಮಿಡಿಯುವ ಸ್ವಭಾವ ಇನ್ನಷ್ಟು ಮುನ್ನೆಲೆಗೆ ಬಂದಿದೆ. ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟದಲ್ಲಿರುವ ಜನರ ನೆರವಿಗೆ ಬರುವುದು ಹೇಗೆಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ನಿದರ್ಶನಗಳನ್ನು ನೋಡುತ್ತಿದ್ದೇವೆ
ಮರುಬಳಕೆ ಮಾಡಬಹುದಾದ ಬ್ಯಾಗ್‌ಗಳನ್ನು ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿರುವ ಮುಂಬಯಿಯ 87 ವರ್ಷದ ಹಿರಿಯ ವ್ಯಕ್ತಿಯೊಬ್ಬರ ಪಾಡು ವೈರಲ್ ಆಗಿದೆ. ಮುಂಬಯಿಯ ದೊಂಬಿವಿಲಿಯ ಫಾಡ್ಕೆ ರಸ್ತೆಯಲ್ಲಿ ತಮ್ಮ ಕಾಯಕ ನಡೆಸುತ್ತಿರುವ ಜೋಶಿ ಅಂಕಲ್ ಬಳಿ, ಆ ಪ್ರದೇಶದಲ್ಲಿ ಓಡಾಡುವ ಮಂದಿ, ಒಂದೊಂದು ಬ್ಯಾಗ್ ಖರೀದಿ ಮಾಡುವ ಮೂಲಕ ದಯವಿಟ್ಟು ಅವರಿಗೆ ನೆರವಾಗಿ ಎಂದು Gauri (@ardor_gauri) ಹೆಸರಿನ ಟ್ವಿಟರ್ ಬಳಕೆದಾರರೊಬ್ಬರು ತಿಳಿಸಿದ್ದಾರೆ.
ಆದರೆ ಮತ್ತೊಬ್ಬರು ಇದೇ ವ್ಯಕ್ತಿಯ ಬಗ್ಗೆ ಹಾಕಿರುವ ಪೋಸ್ಟ್‌ನಲ್ಲಿ, ಈ ವ್ಯಕ್ತಿಗೆ ವಿದೇಶದಲ್ಲಿ ಚೆನ್ನಾಗಿ ಸೆಟಲ್ ಆಗಿರುವ ಮಕ್ಕಳಿದ್ದು, ಸಿರಿವಂತರಾದರೂ ಸಹ ಮನತೃಪ್ತಿಗಾಗಿ ಈ ಶ್ರಮದ ಕೆಲಸ ಮಾಡುತ್ತಿದ್ದಾರೆ ಎಂದು ಸುಶ್ಮಿತ್ ಶೆಟ್ಟಿ ಹೆಸರಿನ ಮತ್ತೊಬ್ಬರು ಟ್ವಿಟ್ಟಿಗ ತಿಳಿಸಿದ್ದಾರೆ.