ಕರೊನಾ ವೈರಸ್ ವಿಶ್ವದಲ್ಲಿ ಅದೆಷ್ಟೋ ಅಮಾಯಕರ ಜೀವವನ್ನ ತೆಗೆದಿದೆ. ಜೀವಭಯದ ನಡುವೆಯೂ ವೈದ್ಯಲೋಕ ಜನರ ಜೀವವನ್ನ ಉಳಿಸೋಕೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಕರೊನಾದಿಂದ ವೃದ್ಧರಿಗೆ ಆಪತ್ತು ಜಾಸ್ತಿ ಎಂಬ ವರದಿ ಬಳಿಕವೂ ಮಹಾರಾಷ್ಟ್ರದಲ್ಲಿ 87 ವರ್ಷದ ವೈದ್ಯ ತಮ್ಮ ಜೀವವನ್ನ ಪಣಕ್ಕಿಟ್ಟು ರೋಗಿಗಳ ಆರೋಗ್ಯವನ್ನ ಕಾಪಾಡ್ತಿದ್ದಾರೆ.
ಹೋಮಿಯೋಪಥಿ ವೈದ್ಯರಾಗಿರೋ ರಾಮಚಂದ್ರ ದಾನೇಕರ್ ಚಂದ್ರಾಪುರದಿಂದ ನಿತ್ಯ 10-15 ಕಿಲೋಮೀಟರ್ ಸೈಕಲ್ನಲ್ಲಿ ಸವಾರಿ ಮಾಡಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಕಳೆದ 60 ವರ್ಷಗಳಿಂದ ಡಾ. ರಾಮಚಂದ್ರ ಬಡರೋಗಿಗಳ ಪಾಲಿಗೆ ಆಶಾಕಿರಣರಾಗಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಡಾ. ರಾಮಚಂದ್ರ ದಾನೇಕರ್, ಕಳೆದ 60 ವರ್ಷಗಳಿಂದ ನಾನು ಹಳ್ಳಿ ಹಳ್ಳಿಗೆ ಭೇಟಿ ನೀಡಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇನೆ. ಕರೊನಾ ಕಾಲದಲ್ಲಿ ಕೆಲ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡೋದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಆದರೆ ನನಗೆ ಆ ಭಯವಿಲ್ಲ. ಈಗಿನ ಜಮಾನದ ವೈದ್ಯರು ಹಣಕ್ಕಾಗಿ ದುಡೀತಾ ಇದ್ದಾರೆ. ಸಮಾಜದ ಸೇವೆ ಮಾಡೋಕೆ ಅಲ್ಲ ಅಂತಾ ಬೇಸರ ವ್ಯಕ್ತಪಡಿಸಿದ್ರು.