ಕೊರೊನಾ ಲಕ್ಷಾಂತರ ಜನರ ಬದುಕು ಬದಲಿಸಿದೆ. ಕೊರೊನಾ ನಂತ್ರ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಹೊತ್ತಿನ ಊಟಕ್ಕೂ ಅನೇಕರು ಪರದಾಡುತ್ತಿದ್ದಾರೆ.
ಈ ಮಧ್ಯೆ ಸಾಮಾಜಿಕ ಜಾಲತಾಣಗಳು ಅನೇಕರಿಗೆ ನೆರವಾಗಿವೆ. ಇದಕ್ಕೆ ದೆಹಲಿಯ ಮಾಲವಿಯಾ ನಗರದ ವೃದ್ಧ ದಂಪತಿ ವಿಡಿಯೋ ಉದಾಹರಣೆ.
80 ವರ್ಷದ ವೃದ್ಧ ದಂಪತಿ ಡಾಬಾ ನಡೆಸುತ್ತಿದ್ದಾರೆ. ಬಾಬಾ ಹೆಸರಿನಲ್ಲಿ ಡಾಬಾ ನಡೆಸುತ್ತಿದ್ದಾರೆ. ಕೊರೊನಾ ನಂತ್ರ ಅವ್ರ ಡಾಬಾಕ್ಕೆ ಜನರು ಬರ್ತಿಲ್ಲ. ಇದ್ರಿಂದ ತೀವ್ರ ತೊಂದರೆಗೊಳಗಾದ ವೃದ್ಧ, ಕ್ಯಾಮರಾ ಮುಂದೆ ಕಣ್ಣೀರಿಟ್ಟಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ವೃದ್ಧನ ವಿಡಿಯೋ ಅನೇಕರ ಕಣ್ಣಲ್ಲಿ ನೀರು ತರಿಸಿದ್ದು ಸುಳ್ಳಲ್ಲ.
ಈಗ ವೃದ್ಧ ದಂಪತಿಗೆ ಅನೇಕರು ನೆರವಿನ ಹಸ್ತ ಚಾಚಿದ್ದಾರೆ. ಬಾಲಿವುಡ್ ನಿಂದ ಕ್ರಿಕೆಟ್ ಕ್ಷೇತ್ರದವರೆಗೆ ಅನೇಕರು ಸಹಾಯಕ್ಕೆ ಮುಂದೆ ಬಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗ್ತಿದ್ದಂತೆ ಡಾಬಾ ಮುಂದೆ ಜನರ ಸಾಲಿದೆ. ಅನೇಕರು ಅಜ್ಜನ ಡಾಬಾಕ್ಕೆ ಹೋಗಿ ಊಟ ಮಾಡ್ತಿದ್ದಾರೆ.
ಟೀಮ್ ಇಂಡಿಯಾದ ಬೌಲರ್ ರವಿಚಂದನ್ ಅಶ್ವಿನ್ ಮತ್ತು ಐಪಿಎಲ್ ನ ದೆಹಲಿ ಕ್ಯಾಪಿಟಲ್ಸ್ ಮತ್ತು ಬಾಲಿವುಡ್ ನಟಿ ಸೋನಮ್ ಕಪೂರ್ ಟ್ವಿಟರ್ ಮೂಲಕ ಸಹಾಯ ಮಾಡುವುದಾಗಿ ಹೇಳಿದ್ದಾರೆ.
https://twitter.com/VasundharaTankh/status/1313881005179064320?ref_src=twsrc%5Etfw%7Ctwcamp%5Etweetembed%7Ctwterm%5E1313922859186626561%7Ctwgr%5Eshare_1&ref_url=https%3A%2F%2Fhindi.news18.com%2Fnews%2Fnation%2F80-year-old-said-crying-no-one-comes-to-dhaba-eyes-will-get-moist-after-watching-video-3285748.html