80 ವರ್ಷದ ವೃದ್ಧ ವಾಮಾಚಾರ ಮಾಡ್ತಿದ್ದಾನೆ ಎಂದು ಅನುಮಾನಗೊಂಡ ರಕ್ತಸಂಬಂಧಿಗಳೇ ಆತನನ್ನ ಜೀವಂತ ಸಮಾಧಿ ಮಾಡಿದ ಅಮಾನವೀಯ ಘಟನೆ ಮೇಘಾಲಯದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನ ಮೋರಿಸ್ ಮಾರಂಗರ್ ಎಂದು ಗುರುತಿಸಲಾಗಿದೆ. ಶಿಲ್ಲಾಂಗ್ ಭಾಗದ ಪಶ್ಚಿಮ ಗ್ಯಾರೋ ಹಿಲ್ಸ್ನಲ್ಲಿ ಆತ ವಾಮಾಚಾರ ಅಭ್ಯಾಸ ಮಾಡ್ತಿದ್ದಾನೆ ಎಂದು ಅನುಮಾನಗೊಂಡ ಸಂಬಂಧಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಪ್ರಕರಣ ಸಂಬಂಧ ಪೊಲೀಸರು 8 ಮಂದಿ ಆರೋಪಿಗಳನ್ನ ಬಂಧಿಸಿದ್ದಾರೆ.
ವೃದ್ಧನ ಕೈ ಕಾಲನ್ನ ಕಟ್ಟಿದ ಕಿಡಿಗೇಡಿಗಳು ಐದು ಅಡಿ ಆಳದಲ್ಲಿ ಹೂತಿದ್ದಾರೆ. ಕಾಲುಗಳನ್ನ ಗೋಣಿಚೀಲದಲ್ಲಿ ಕಟ್ಟಿದ್ರೆ ಕೈಯನ್ನ ಹಗ್ಗದಿಂದ ಕಟ್ಟಲಾಗಿದೆ. ಹಾಗೂ ಮುಖವನ್ನ ಬಟ್ಟೆಯಿಂದ ಮುಚ್ಚಿ ಬಳಿಕ ಹೂತಿದ್ದಾರೆ. ಇನ್ನು ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಗೃಹ ಸಚಿವ ಲಖ್ಮೆನ್ ರೈನ್ಬುಯಿ, ಇದೊಂದು ಅಮಾನವೀಯ ಘಟನೆ , ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತಾ ಭರವಸೆ ನೀಡಿದ್ರು.