ಕೆಲ ದಿನಗಳ ಹಿಂದಷ್ಟೇ ಬ್ರಿಟನ್ನಿಂದ ಕೇರಳಕ್ಕೆ ಮರಳಿದ 8 ಮಂದಿಯ ಕೊರೊನಾ ವರದಿ ಪಾಸಿಟಿವ್ ಬಂದಿದೆ.
ಹೆಚ್ಚಿನ ಸಂಶೋಧನೆಗಾಗಿ ಅವರ ಸ್ವ್ಯಾಬ್ ಮಾದರಿಗಳನ್ನ ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಬ್ರಿಟನ್ನಿಂದ ರಾಜ್ಯಕ್ಕೆ ಹಿಂದುರಿಗಿದ್ದ 8 ಜನರ ಮಾದರಿಗಳು ಸಕಾರಾತ್ಮಕವಾಗಿ ಬಂದಿದೆ. ಹೆಚ್ಚಿನ ಪರೀಕ್ಷೆಗಾಗಿ ಎನ್ಐವಿಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವೆ ಕೆ. ಕೆ. ಶೈಲಜಾ ಹೇಳಿದರು.
ಈ ಘಟನೆ ಬಳಿಕ ಕೇರಳದ ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನ ಇನ್ನಷ್ಟು ಬಲಪಡಿಸಲಾಗಿದೆ.
ಬ್ರಿಟನ್ನಲ್ಲಿ ರೂಪಾಂತರಿ ಕೊರೊನಾ ವೈರಸ್ ಕಂಡು ಬಂದ ಹಿನ್ನೆಲೆ ಮುನ್ನಚ್ಚರಿಕಾ ಕ್ರಮವಾಗಿ ಭಾರತದಿಂದ ಬ್ರಿಟನ್ಗೆ ಎಲ್ಲಾ ಅಂತಾರಾಷ್ಟ್ರೀಯ ವಿಮಾನಯಾವನ್ನ ರದ್ದುಗೊಳಿಸಲಾಗಿದೆ .