8 ದಿನದ ಮಗುವನ್ನ ಕೋತಿಗಳು ಮನೆಯ ಛಾವಣಿಯಿಂದ ಎಸೆದ ಪರಿಣಾಮ ಹಸುಗೂಸು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಗ್ರಾಮವೊಂದರಲ್ಲಿ ವರದಿಯಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುತ್ತಿರೋದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಮನೆಯಲ್ಲಿ ಅವಳಿ ಶಿಶುಗಳು ಮಲಗಿದ್ದ ಕೋಣೆಗೆ ನುಗ್ಗಿದ ಕೋತಿಗಳು ಮಕ್ಕಳನ್ನ ಹೊತ್ತೊಯ್ತಿದೆ. ಇದನ್ನ ನೋಡಿದ ಅವಳಿ ಹೆಣ್ಣು ಮಕ್ಕಳ ತಾಯಿ ಭುವನೇಶ್ವರಿ ಕಿರುಚಲು ಆರಂಭಿಸಿದ್ದಾರೆ. ಕೂಡಲೇ ನೆರೆ ಹೊರೆಯವರು ಸೇರಿ ಮಂಗನ ಕೈಯಿಂದ ಕಂದಮ್ಮಗಳನ್ನ ಕಾಪಾಡಲು ಯತ್ನಿಸಿದ್ದಾರೆ.
ಆದರೆ ಜನರು ಶಿಶುಗಳನ್ನ ಕೋತಿಗಳ ಕೈಯಿಂದ ಕಸಿದುಕೊಳ್ಳಲು ಹೋಗ್ತಿದ್ದಂತೆಯೇ ಒಂದು ಮಗುವನ್ನ ಮನೆಯ ಛಾವಣಿಯಲ್ಲೇ ಬಿಟ್ಟು ಇನ್ನೊಂದು ಮಗುವನ್ನ ಛಾವಣಿಯಿಂದ ಎಸೆದಿವೆ. ಕೋತಿಗಳು ಎಸೆದ ರಭಸಕ್ಕೆ ಚರಂಡಿಗೆ ಹೋಗಿ ಬಿದ್ದ ಹಸುಗೂಸು ಸಾವನ್ನಪ್ಪಿದೆ. ಇನ್ನೊಂದು ಮಗು ಅಪಾಯದಿಂದ ಪಾರಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.