ಅಂತರ್ಜಾಲದಲ್ಲಿ ಪ್ರತಿನಿತ್ಯವೂ ಭಿನ್ನವಿಭಿನ್ನವಾದ ಕಥೆಗಳು ಬರುತ್ತಿರುತ್ತವೆ. ಜೀವನದ ಅನೇಕ ಮಜಲುಗಳನ್ನು ನಮ್ಮೆದುರು ತೆರೆದಿಡುತ್ತಾ ಹೋಗುವ ಈ ಸ್ಟೋರಿಗಳಲ್ಲಿ ಕೆಲವು ಖುಷಿ ಕೊಟ್ಟರೆ ಕೆಲವು ಕಣ್ಣೀರು ಹಾಕುವಂತೆ ಮಾಡುತ್ತವೆ.
ಕೋಲ್ಕತ್ತಾ ಹಿರಿಯ ವ್ಯಕ್ತಿಯೊಬ್ಬರ ಕಥೆಯೊಂದು ವೈರಲ್ ಆಗಿದ್ದು, ಇದರಲ್ಲಿ 77 ವರ್ಷದ ಸ್ವಪನ್ ಸೇಟ್ ಅವರು ತಮ್ಮ ಮಡದಿ ಹಾಗೂ ಸಂಗೀತದ ಮೇಲಿನ ತಮ್ಮ ಪ್ರೀತಿಯಿಂದ ನೆಟ್ಟಿಗರ ಕಣ್ಣಾಲಿ ತೇವವಾಗಿಸಿದ್ದಾರೆ. ನಗರದ ಅನೇಕ ಭಾಗಗಳಿಗೆ ತೆರಳುವ ಇವರು ತಮ್ಮ ಮಡದಿಯ ಕ್ಯಾನ್ಸರ್ ಚಿಕಿತ್ಸೆಗೆ ದುಡ್ಡು ಹೊಂದಿಸುವ ಯತ್ನ ಮಾಡುತ್ತಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಸಹ ಸ್ವಪನ್ ಅವರು ಜೀವನ ಹೋರಾಟದಲ್ಲಿ ಎದೆಗುಂದದೇ ತಮ್ಮ ವಾದ್ಯದಿಂದ ನೋಡುಗರ ಮನಗೆಲ್ಲುತ್ತಿದ್ದಾರೆ.
ʼಲಾಕ್ ಡೌನ್ʼ ನಿಯಮ ಉಲ್ಲಂಘಿಸಿದವಳನ್ನು ಹಿಡಿಯಲು ಹೋಗಿ ಬೇಸ್ತು ಬಿದ್ದ ಪೊಲೀಸ್
ಕೋಲ್ಕತ್ತಾದ ಬಲರಾಂ ಡೇ ಬೀದಿಯ ನಿವಾಸಿಯಾದ ಸೇಟ್‌ರ ಮಡದಿಗೆ ಗರ್ಭಕೋಶದಲ್ಲಿ ಕ್ಯಾನ್ಸರ್ ಇದೆ ಎಂದು 2002ರಲ್ಲಿ ಕಂಡು ಬಂದಿತ್ತು. ಆಗಿನಿಂದ ಸೇಟ್ ಅವರು ದೇಶಾದ್ಯಂತ ತೆರಳಿ ಬೀದಿಗಳಲ್ಲಿ ವಯಲಿನ್ ನುಡಿಸುತ್ತಾ ಮಡದಿಯ ಚಿಕಿತ್ಸೆಗೆ ದುಡ್ಡು ಹೊಂದಿಸಲು ಯತ್ನಿಸುತ್ತಿದ್ದಾರೆ.
2019ರಲ್ಲಿ ಮುಂಬಯಿಯ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಸೇಟ್‌ರ ಮಡದಿಗೆ ಚಿಕಿತ್ಸೆ ನೀಡಲಾಗಿದ್ದು ಅವರೀಗ ಚೇತರಿಸಿಕೊಂಡು ಮತ್ತೆ ತಮ್ಮ ಕಾಲಿನ ಮೇಲೆ ನಡೆಯುವಂತೆ ಆಗಿದ್ದಾರೆ. ಆದರೂ ಸಹ ಕಷ್ಟಕಾಲದಲ್ಲಿ ತಮಗೆ ನೆರವಾದ ವಯೋಲಿನ್ ವಾದ್ಯದ ಸೇವೆಯನ್ನು ಮುಂದುವರೆಸಿರುವ ಸೇಟ್ ತಮ್ಮ ಕಲೆಯಿಂದ ನೋಡುಗರನ್ನು ಮನರಂಜಿಸುವ ಕಾಯಕ ಮುಂದುವರೆಸಿದ್ದಾರೆ. ಸೇಟ್ ಅವರು ವಯೋಲಿನಿಸ್ಟ್ ಮಾತ್ರವಲ್ಲದೇ ಪೇಂಟರ್ ಹಾಗೂ ಶಿಲ್ಪಿಯೂ ಆಗಿದ್ದಾರೆ.