ಕೋವಿಡ್-19 ಸೋಂಕು ಪೀಡಿತರಾಗಿದ್ದ ಕೋಲ್ಕತ್ತಾದ 75 ವರ್ಷದ ಮಹಿಳೆಯೊಬ್ಬರು ತಮ್ಮನ್ನು ಚೇತರಿಸಿಕೊಳ್ಳಲು ನೆರವಾದ ವೈದ್ಯರೊಬ್ಬರನ್ನು ಅಪ್ಪಿಕೊಳ್ಳುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಿಪಿಇ ಕಿಟ್ಧಾರಿಯಾಗಿರುವ ವೈದ್ಯೆ ಅವಿಸ್ತಿಕಾ ಮಲ್ಲಿಕ್ರನ್ನು ಅಪ್ಪಿಕೊಂಡ ಹಿರಿಯ ಮಹಿಳೆಯ ಕಣ್ಣಾಲಿಗಳಲ್ಲಿ ಆನಂದಭಾಷ್ಪ ಹರಿದಿದೆ.
ʼಕೋವಿಡ್ʼ ಜಾಗೃತಿ ಮೂಡಿಸಲು ಸುದರ್ಶನ್ ಪಟ್ನಾಯಕರ ವಿಶಿಷ್ಟ ಅಭಿಯಾನ
“ಹತ್ತು ದಿನಗಳ ಮಟ್ಟಿಗೆ ಕೋವಿಡ್ ವಿರುದ್ಧ ಹೋರಾಡಿದ ಬಳಿಕ 75 ವರ್ಷದ ಅಜ್ಜಿಯೊಬ್ಬರು ಚೇತರಿಸಿಕೊಂಡು ಮನೆಗೆ ಹೊರಟಿದ್ದಾರೆ. ಅವರು ಹೊರಡುವ ವೇಳೆ, ತಮ್ಮನ್ನು ಶುಶ್ರೂಷೆ ಮಾಡಿದ ವೈದ್ಯರನ್ನು ಅಪ್ಪಿಕೊಂಡು, ಆಶೀರ್ವಾದ ಮಾಡಿದ್ದಾರೆ” ಎಂದು ಬೆಂಗಾಲಿಯಲ್ಲಿ ಬರೆಯಲಾಗಿರುವ ಕ್ಯಾಪ್ಷನ್ ಇರುವ ಈ ಪೋಸ್ಟ್ ವೈರಲ್ ಆಗಿದೆ.
https://www.facebook.com/drtanmoydeyofficial/posts/228794909043821