alex Certify ಪ್ರೀತಿ, ಪ್ರೇಮ, ಪ್ರಣಯ: ಆಂಟಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಜ್ಜ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿ, ಪ್ರೇಮ, ಪ್ರಣಯ: ಆಂಟಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಜ್ಜ

ಪ್ರತಾಪಗಢ್: ಇಳಿವಯಸ್ಸಲ್ಲಿ ಪ್ರೀತಿ ಚಿಗುರಿ 42 ವರ್ಷದ ಮಹಿಳೆಯೊಂದಿಗೆ 75 ವರ್ಷದ ವೃದ್ಧ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಉತ್ತರಪ್ರದೇಶದ ಪ್ರತಾಪಗಢದಲ್ಲಿ ಈ ಪ್ರೇಮ ವಿವಾಹ ನಡೆದಿದೆ. ಫತನ್ ಪುರದ ಖುರ್ದ್ ಗ್ರಾಮಕ್ಕೆ ಮದುವೆಯಾಗಿ ಬಾಜಾಭಜಂತ್ರಿಯೊಂದಿಗೆ ಆಗಮಿಸಿದ ಇವರನ್ನು ಕಂಡು ಜನ ದಂಗಾಗಿದ್ದು ನೋಡಲು ಮುಗಿಬಿದ್ದಿದ್ದಾರೆ.

ಜೋಡಿಯನ್ನು ಆತ್ಮೀಯವಾಗಿ ಸ್ವಾಗತಿಸಿ ಶುಭಃ ಹಾರೈಸಿದ್ದಾರೆ. ವೃದ್ಧ ಅವಧ್ ನಾರಾಯಣ್ ಅನೇಕ ವರ್ಷಗಳಿಂದ ವರ್ಷದ ರಾಮ್ ರತಿ ಅವರನ್ನು ಪ್ರೀತಿಸುತ್ತಿದ್ದರು. ಮಕ್ಕಳ ಮುಂದೆ ತಮ್ಮ ಪ್ರೀತಿ ಮದುವೆ ವಿಷಯ ಪ್ರಸ್ತಾಪಿಸಿದಾಗ ಎಡೂ ಮನೆಯವರು ಒಪ್ಪಿಕೊಂಡು ಅಕ್ಟೋಬರ್ 26 ರಂದು ಮದುವೆ ಮಾಡಿಸಿದ್ದಾರೆ.

ವಯಸ್ಸು ಜಾತಿಯನ್ನು ಮೀರಿದ ಪ್ರೀತಿ ನಮ್ಮದಾಗಿದೆ. ಕೆಲವರು ವ್ಯಂಗ್ಯವಾಡಿದರೂ, ತಲೆ ಕೆಡಿಸಿಕೊಳ್ಳುವುದಿಲ್ಲ ಮನೆಯವರ ಬೆಂಬಲದಿಂದ ಮದುವೆಯಾಗಿದ್ದೇವೆ ಎಂದು ದಂಪತಿ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...