alex Certify ಫ್ರೀಜರ್​ ನಲ್ಲಿದ್ದ ವೃದ್ಧ ಬದುಕುಳಿದಿದ್ದೇ ಪವಾಡ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ರೀಜರ್​ ನಲ್ಲಿದ್ದ ವೃದ್ಧ ಬದುಕುಳಿದಿದ್ದೇ ಪವಾಡ…!

ಫ್ರೀಜರ್​ನಲ್ಲಿ ಸಿಲುಕಿದ್ದ 74 ವರ್ಷದ ವೃದ್ಧನನ್ನ ರಕ್ಷಿಸಿದ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ವೃದ್ಧನನ್ನ ಕುಟುಂಬಸ್ಥರು ಮನೆಗೆ ಕರೆದುಕೊಂಡು ಹೋಗಿದ್ರು. ಇದಾದ ಬಳಿಕ ಆ ವೃದ್ಧ ಫ್ರೀಜರ್​ನಲ್ಲಿ ಸಿಲುಕಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿದೆ .

ಫ್ರೀಜರ್​ನಲ್ಲಿ ಇದ್ದ ವ್ಯಕ್ತಿಯನ್ನ ಬಾಲಸುಬ್ರಹ್ಮಣ್ಯ ಕುಮಾರ್​ ಎಂದು ಗುರುತಿಸಲಾಗಿದೆ. ಫ್ರೀಜರ್​ನಿಂದ ರಕ್ಷಿಸಿದ ಬಳಿಕ ಬಾಲಸುಬ್ರಹ್ಮಣ್ಯಂರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಲ ದಿನಗಳ ಹಿಂದಷ್ಟೆ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಬಾಲಸುಬ್ರಹ್ಮಣ್ಯಂರನ್ನ ಅವರ ಸಹೋದರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಹೋಗಿದ್ದರು. ಇದೇ ವೇಳೆ ಆ ಸಹೋದರ ಫ್ರೀಜರ್​ ಬಾಕ್ಸ್​ನ್ನ ಕೇಳಿದ್ದರು. ಹೀಗಾಗಿ ವೃದ್ಧನ ಮನೆಯವರು ಅವರ ಸಾವಿಗೆ ಕಾಯುತ್ತಿದ್ದರಾ ಎಂಬ ಅನುಮಾನ ಹುಟ್ಟುಹಾಕಿದೆ.

ಏಜೆನ್ಸಿ ಒಂದರಿಂದ ಫ್ರೀಜರ್​ ಬಾಕ್ಸ್ ಪಡೆದಿದ್ದ ಸಹೋದರ ಬೇಕಂತಲೇ ಆ ವ್ಯಕ್ತಿಯನ್ನ ಫ್ರೀಜರ್​ ಒಳಗೆ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ಏಜನ್ಸಿ ಸಿಬ್ಬಂದಿ ಫ್ರೀಜರ್​ನ್ನ ವಾಪಸ್​ ತೆಗೆದುಕೊಂಡು ಹೋಗಲು ಮನೆಗೆ ಬಂದ ವೇಳೆ ಪೆಟ್ಟಿಗೆಯೊಳಗೆ ವೃದ್ಧ ಉಸಿರಾಡ್ತಾ ಇದ್ದ ಅಂಶ ಬಯಲಾಗಿದೆ. ಇನ್ನು ಈ ಸಂಬಂಧ ಕುಟುಂಬಸ್ಥರ ವಿರುದ್ಧ ಪೊಲೀಸರು ನಿರ್ಲಕ್ಷ್ಯದ ನಡುವಳಿಕೆ ಹಾಗೂ ಜೀವಕ್ಕೆ ಅಪಾಯ ತಂದೊಡ್ಡಿದ್ದ ಕಾರಣದಡಿ ಪ್ರಕರಣ ದಾಖಲಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...