ಗೊಂಡಿಯಾ ಬ್ಲಾಕ್ನ 70 ವರ್ಷದ ವೃದ್ಧೆ ಮೇಲೆ ಜಿಲ್ಲಾ ಕೇಂದ್ರ ಆಸ್ಪತ್ರೆಯ ಸಿಬ್ಬಂದಿಯೇ ಅತ್ಯಾಚಾರವೆಸೆಗಿದ ಅಮಾನವೀಯ ಘಟನೆ ವರದಿಯಾಗಿದೆ. ಮಂಗಳವಾರ ಈ ದಾರುಣ ಘಟನೆ ನಡೆದಿದ್ದು, ಬುಧವಾರ ರಾತ್ರಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಕೆಲ ದಿನಗಳ ಹಿಂದಷ್ಟೇ ಸಂತ್ರಸ್ತೆ ವೃದ್ಧೆಯ ಮೊಮ್ಮಗಳು ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಳು. ಮೊಮ್ಮಗಳಿಗೆ ಪೋಷಕರು ಇಲ್ಲದ ಕಾರಣ ಮೂರು ದಿನಗಳಿಂದ ಸಂತ್ರಸ್ತ ವೃದ್ಧೆ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಳು.
ಕೊರೋನಾ ಸೋಂಕಿತರ ರಕ್ಷಣೆಗೆ ‘ಸಂಜೀವಿನಿ’ ಸಿದ್ಧ: 162 ಆಕ್ಸಿಜನ್ ಉತ್ಪಾದನಾ ಘಟಕ, 1 ಲಕ್ಷ ಸಿಲಿಂಡರ್ ಖರೀದಿ
ಮಂಗಳವಾರ ಸಂಜೆ ವೃದ್ಧೆ ಜಿಲ್ಲಾಸ್ಪತ್ರೆ ಸಮೀಪದ ಟೀ ಸ್ಟಾಲ್ ಒಂದರಲ್ಲಿ ಚಹ ಕುಡಿಯುತ್ತಿದ್ದ ವೇಳೆ ನಾಲ್ವರು ಆರೋಪಿಗಳು ಅಲ್ಲೇ ಹತ್ತಿರವಿದ್ದ ನಿರ್ಮಾಣ ಹಂತದ ಕಟ್ಟಡದ ಬಳಿ ಬರುವಂತೆ ಆಮಿಷವೊಡ್ಡಿದ್ದಾರೆ. ಇಲ್ಲಿ ವೃದ್ಧೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಆರೋಪಿಗಳು ಬಳಿಕ ಆಕೆಯನ್ನ ಅಲ್ಲೇ ಬಿಟ್ಟು ತೆರಳಿದ್ದಾರೆ. ಗಾಯದಿಂದ ಬಳಲುತ್ತಿದ್ದ ವೃದ್ಧೆ ಹೇಗೋ ಆಸ್ಪತ್ರೆಯನ್ನ ತಲುಪಿದ್ದಾರೆ. ಆಕೆಯನ್ನ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿದ್ದು ಚಿಕಿತ್ಸೆ ನೀಡಲಾಗ್ತಿದೆ.
ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಗುತ್ತಿಗೆ ಆಧಾರಿತ ಸಿಬ್ಬಂದಿ ಹಾಗೂ ಚಹ ಮಾರಾಟಗಾರ ಈ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ವೃದ್ಧೆ ಮೇಲೆ ಅತ್ಯಾಚಾರ ನಡೆದಿದೆ ಎಂದು ಉಪವಿಭಾಗ ಪೊಲೀಸ್ ಅಧಿಕಾರಿ ಶ್ರೀ ಹರ್ಷಾ ಮಿಶ್ರಾ ಹೇಳಿಕೆ ನೀಡಿದ್ದಾರೆ. ಅಲ್ಲದೇ ಪ್ರಕರಣ ಸಂಬಂಧ ಶಂಕಿತರನ್ನ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂತಲೂ ಹೇಳಿದ್ದಾರೆ.