ಶಾಲಾ ದಿನಗಳಲ್ಲಿ ಸೂಪರ್ ಹೀರೋಗಳ ಮೇಲೆ ಸಖತ್ ಕ್ರೇಝ್ ಇರುವುದು ಎಲ್ಲರಲ್ಲೂ ಕಾಮನ್. ನಾವೂ ಸಹ ಅವರಂತೆ ಆಗಬೇಕು ಎನ್ನುವ ಕನಸು ಕಾಣುವುದನ್ನೇ ಸ್ಕೂಲ್ ಬಾಯ್ ಡ್ರೀಮ್ ಎನ್ನುವುದು.
ಉತ್ತರ ಪ್ರದೇಶದ ಕಾನ್ಪುರದ 7 ವರ್ಷದ ಈ ಮಿನಿ ಸ್ಪೈಡರ್ ಮ್ಯಾನ್, ಯಾವುದೇ ಹೆಚ್ಚುವರಿ ನೆರವಿಲ್ಲದೆ ಗೋಡೆಗಳನ್ನು ಏರುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ದಾನೆ.
ಮೂರನೇ ತರಗತಿಯಲ್ಲಿ ಓದುತ್ತಿರುವ ಯಶ್ರಥ್ ಸಿಂಗ್ ಗೌರ್ ಗೋಡೆ ಏರುವುದನ್ನು ತನ್ನಿಂತಾನೇ ಕಲಿತುಕೊಂಡಿದ್ದಾನೆ. ’ಸ್ಪೈಡರ್ ಮ್ಯಾನ್’ ಚಿತ್ರವನ್ನು ನೋಡಿದ ಬಳಿಕ ಗೋಡೆಗಳನ್ನು ಏರುವುದನ್ನು ಕಲಿಯಲು ಪ್ರೇರಣೆಯಾಯಿತೆಂದು ಹೇಳಿಕೊಂಡಿದ್ದಾನೆ.