
ನವದೆಹಲಿ: ತ್ರಿಪುರಾದ ಹಳ್ಳಿಯೊಂದರಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 8 ವರ್ಷದ ಬಾಲಕಿ ಮೇಲೆ 7 ಮಂದಿ ಹದಿಹರೆಯದ ಬಾಲಕರು ಅತ್ಯಾಚಾರ ಎಸಗಿದ್ದಾರೆ.
ಬಾಲಕಿಗೆ ಪರಿಚಿತರಾಗಿರುವ ಬಾಲಕರು ಜೂಟಾಟಕ್ಕೆ ಆಹ್ವಾನಿಸಿ ಇಂತಹ ಅಪರಾಧ ಕೃತ್ಯವೆಸಗಿದ್ದಾರೆ. ಶುಕ್ರವಾರ ಘಟನೆ ನಡೆದಿದ್ದು ಸಂತ್ರಸ್ತೆಯ ತಂದೆ ಶನಿವಾರ ದೂರು ನೀಡಿದ್ದಾರೆ.
ಪಶ್ಚಿಮ ತ್ರಿಪುರಾ ಜಿಲ್ಲೆಯ ತಬರಿಯಾದಲ್ಲಿ ಆರೋಪಿಗಳು ವಾಸವಾಗಿದ್ದು ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಒಬ್ಬ ಪರಾರಿಯಾಗಿದ್ದಾನೆ. ವಶಕ್ಕೆ ಪಡೆದ ಬಾಲಕರಲ್ಲಿ ನಾಲ್ವರನ್ನು ಬಾಲಾಪರಾಧಿ ಕೇಂದ್ರಕ್ಕೆ, ಇಬ್ಬರಿಗೆ ಕೊರೊನಾ ಸೋಂಕು ತಗುಲಿದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಪವಿಭಾಗೀಯ ಪೊಲೀಸ್ ಅಧಿಕಾರಿ ಪ್ರಿಯಾ ಮಾಧುರಿ ಮಜುಂದಾರ್, ಸಂತ್ರಸ್ತೆ ಮೂರನೇ ತರಗತಿಯಲ್ಲಿ ಓದುತ್ತಿದ್ದು ಆಕೆಯನ್ನು ಆಟವಾಡಲು ಕರೆದು 7 ಮಂದಿ ಬಾಲಕರು ಇಂತಹ ಕೃತ್ಯವೆಸಗಿದ್ದಾರೆ ಎಂದು ತಿಳಿಸಿದ್ದಾರೆ.