ಕೃಷಿ ಭೂಮಿಗೆ ಬಂದು ಜನರ ಹೆದರಿಕೆಗೆ ಕಾರಣವಾಗಿದ್ದ ಮೊಸಳೆಯನ್ನು ರಕ್ಷಿಸಿ ಕಾಡಿನಲ್ಲಿ ಬಿಟ್ಟ ಘಟನೆ ಮೊಸಳೆಯನ್ನು ಗುಜರಾತ್ ನ ಕೆಲನ್ ಪುರ್ ಗ್ರಾಮದಲ್ಲಿ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ವಡೋದರಾ ಜಿಲ್ಲೆಯ ಜನವಸತಿ ಪ್ರದೇಶದಲ್ಲಿ ಮೊಸಳೆ ಪ್ರವೇಶಿಸಿದ ಏಳನೇ ಘಟನೆ ಇದಾಗಿದೆ.
ಮೈ ವಡೋದರಾ ಟ್ವೀಟರ್ ಖಾತೆಯಲ್ಲಿ ಮೊಸಳೆ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಪೋಸ್ಟ್ ಮಾಡಲಾಗಿದೆ. ಏಳು ಅಡಿ ಉದ್ದದ ಮೊಸಳೆಯ ರಕ್ಷಣಾ ಕಾರ್ಯಾಚರಣೆ ವೇಳೆ ಅದು ಆಕ್ರಮಣಕಾರಿಯಾಗಿ ತಿರುಗಿ ಬೀಳುವುದನ್ನು ನೋಡಬಹುದಾಗಿದೆ.
ನಾವು ಪ್ರಾಣಿಗಳಿಗೆ ಸಹಾಯ ಮಾಡುವಾಗ ಅವು ನಮ್ಮ ಸಹಾಯಕ್ಕೆ ಬಂದಿದ್ದಾರೆ ಎಂದು ತಿಳಿದಿರುವುದಿಲ್ಲ. ಹೀಗಾಗಿ ಬಹಳ ಎಚ್ಚರಿಕೆಯಿಂದ ಕಾರ್ಯಾಚರಣೆ ಮಾಡಬೇಕಾಗುತ್ತದೆ ಎಂದು ರಕ್ಷಣಾ ತಂಡದ ಸದಸ್ಯರು ಹೇಳಿದ್ದಾರೆ.