ಕೊರೊನಾದಿಂದಾಗಿ ಕ್ಲೋಸ್ ಆಗಿದ್ದ ತರಗತಿಗಳು ಈಗ ಒಂದೊಂದಾಗಿ ಆರಂಭವಾಗುತ್ತಿವೆ. ಹೊಸ ಶೈಕ್ಷಣಿಕ ವರ್ಷದ ತರಗತಿಗೆ ಏಪ್ರಿಲ್ನಲ್ಲೇ ಶಾಲೆಗಳನ್ನ ಪುನಾರಂಭಿಸಲು ಶೇಕಡಾ 69ರಷ್ಟು ಪೋಷಕರು ಒಲವು ತೋರಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ದೇಶಾದ್ಯಂತ 19000ಕ್ಕೂ ಹೆಚ್ಚು ಪೋಷಕರ ಸಂದರ್ಶನದ ವೇಳೆ ಕೇವಲ 26 ಪ್ರತಿಶತದಷ್ಟು ಮಂದಿ ಮಾತ್ರ ಕೊರೊನಾ ಲಸಿಕೆ ಸ್ವೀಕಾರದ ಬಳಿಕ ಮಕ್ಕಳು ಶಾಲೆಗೆ ಹೋಗೋದು ಒಳಿತು ಎಂದಿದ್ದಾರೆ.
69 ಪ್ರತಿಶತ ಪೋಷಕರು ಭಾರತದಲ್ಲಿ ಶಾಲೆಗಳು ಏಪ್ರಿಲ್ನಲ್ಲೇ ಶುರುವಾಗಲಿ ಎಂದು ಹೇಳಿದ್ದಾರೆ. ಇದರಲ್ಲೂ 23 ಪ್ರತಿಶತದಷ್ಟು ಪೋಷಕರು ಜನವರಿಯಂದಲೇ ಶಾಲೆಗಳನ್ನ ಪ್ರಾರಂಭಿಸಿ ಎಂದು ಹೇಳಿದ್ದಾರೆ ಎಂದು ಆನ್ಲೈನ್ ಫ್ಲಾಟ್ಫಾರಂ ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆ ಮಾಹಿತಿ ನೀಡಿದೆ.
ಕೊರೊನಾ ಹರಡುವಿಕೆಯನ್ನ ನಿಯಂತ್ರಿಸುವುದಕ್ಕೋಸ್ಕರ ದೇಶಾದ್ಯಂತ ಕಳೆದ ಮಾರ್ಚ್ನಿಂದ ಶಾಲೆಗಳನ್ನ ಮುಚ್ಚಲಾಗಿದೆ. ಕೆಲ ರಾಜ್ಯಗಳಲ್ಲಿ ಅಕ್ಟೋಬರ್ನಿಂದ ಶಾಲೆಗಳನ್ನ ಪುನಃ ತೆರೆಯಲಾಯಿತು. ಆದಾಗ್ಯೂ ಕೆಲ ರಾಜ್ಯಗಳು ಶಾಲೆಗಳನ್ನ ಪುನಾರಂಭಿಸಲು ಹಿಂದೇಟು ಹಾಕುತ್ತಿವೆ.