ದೇಶಾದ್ಯಂತ ಅನ್ ಲಾಕ್ 1.0 ಅವಧಿ ಪೂರ್ಣಗೊಂಡು 2.0 ಆರಂಭಗೊಳ್ಳುತ್ತಿದೆ. ಆದರೆ, ಅನೇಕರು ಲಾಕ್ ಡೌನ್ ಗುಂಗಿನಿಂದ ಹೊರಬರಲು ಇಚ್ಛಿಸುತ್ತಿಲ್ಲ. ಒಂದು ವೇಳೆ ಮೆಟ್ರೋ ಸೇರಿದಂತೆ ಯಾವುದೇ ಸ್ಥಳೀಯ ರೈಲು ಸೇವೆ, ಜಿಮ್, ಈಜುಕೊಳ ಪುನಾರಂಭಗೊಂಡರೂ ಹೋಗದಿರಲು ನಿಶ್ಚಯಿಸಿದ್ದಾರೆ.
ಮೆಟ್ರೋದಂತಹ ಸ್ಥಳೀಯ ರೈಲು ಸೇವೆ ಅರಂಭಗೊಂಡ ನಂತರದ 30 ದಿನಗಳವರೆಗೆ ಓಡಾಡದಿರಲು ಶೇ.67 ರಷ್ಟು ಜನರು ಬಯಸಿದ್ದಾರೆ.
ಸ್ಥಳೀಯ ಸಮೀಕ್ಷೆಗಳ ಪ್ರಕಾರ ಶೇ.15 ರಷ್ಟು ಜನರು ಮಾತ್ರವೇ ಈಜುಕೊಳ ಅಥವಾ ಜಿಮ್ ಗಳಿಗೆ ತೆರಳುವ ಮನಸ್ಸು ಮಾಡಿದ್ದು, ಉಳಿದ ಶೇ.85 ರಷ್ಟು ಮಂದಿ ದೂರ ಉಳಿಯುವುದಾಗಿ ತಿಳಿಸಿದ್ದಾರೆ.
ಹೋಟೆಲ್, ಹೋಮ್ ಸ್ಟೇಗಳು ಆರಂಭಗೊಂಡ 3 ತಿಂಗಳವರೆಗೆ ವಾಸ್ತವ್ಯ ಹೂಡಬಾರದೆಂದು ಶೇ.93 ರಷ್ಟು ನಾಗರಿಕರು ತೀರ್ಮಾನಿಸಿದ್ದಾರೆ. ಅಧ್ಯಯನ ಕೈಗೊಂಡ ದೇಶದ 241 ಜಿಲ್ಲೆಗಳಿಂದ 24 ಸಾವಿರಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಅನ್ ಲಾಕ್ ಗಿಂತ ಹೆಚ್ಚಾಗಿ ಲಾಕ್ ಡೌನ್ ಗೇ ಒತ್ತು ಕೊಟ್ಟಿವೆ.