ರಾಷ್ಟ್ರ ರಾಜಧಾನಿ ದೆಹಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ 62 ವರ್ಷದ ವೃದ್ಧೆಗೆ ಯಶಸ್ವಿಯಾಗಿ ಮೊಣಕೈ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕೊರೊನಾ ವೈರಸ್ ತಗುಲುವ ಭಯ ಹಿನ್ನೆಲೆ ವೃದ್ಧೆ ಕಳೆದ 8 ತಿಂಗಳಿನಿಂದ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳದೇ ಕಾದಿದ್ದಾರೆ.
ಅಖ್ತರಿ ಅಲಿ ಎಂಬ ವೃದ್ಧೆ ಅಸ್ಥಿರಜ್ಜು ಗಾಯಗಳಿಂದ ಬಳಲುತ್ತಿದ್ದರು. ಕರೊನಾ ಇದ್ದಿದ್ದರಿಂದ ವೃದ್ಧೆ ಶಸ್ತ್ರಚಿಕಿತ್ಸೆ ಮಾಡಿಕೊಳ್ಳೋಕೂ ಹಿಂಜರಿದಿದ್ದಾರೆ.
ಬರೋಬ್ಬರಿ 8 ತಿಂಗಳು ಬಳಿಕ ದೆಹಲಿಯ ಅಪೋಲೋ ಆಸ್ಪತ್ರೆಗೆ ಬಂದ ವೃದ್ಧೆಯ ಮೊಣಕೈ ಪರೀಕ್ಷಿಸಿದ ವೈದ್ಯರು ಈ ಕೂಡಲೇ ಶಸ್ತ್ರ ಚಿಕಿತ್ಸೆ ಮಾಡದಿದ್ದರೆ ಶಾಶ್ವತ ಅಂಗವಿಕಲ ಇಲ್ಲವೇ ಪಾಶ್ವುವಾಯು ಸಂಭವಿಸೋ ಸಾಧ್ಯತೆ ಇದೆ ಅಂತಾ ಹೇಳಿದ್ದಾರೆ.
ಶಸ್ತ್ರಚಿಕಿತ್ಸೆಗೆ ಕರೆದೊಯ್ಯುವರೆಗೂ ವೃದ್ಧೆಗೆ ತಾನು ಡಯಾಬಿಟೀಸ್ನಿಂದ ಬಳಲುತ್ತಿದ್ದೇನೆ ಅನ್ನೋದು ತಿಳಿದಿರಲಿಲ್ಲ. ಆದರೆ ಈ ಎಲ್ಲ ಸವಾಲಿನ ನಡುವೆಯೂ ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಮೊಣಕೈ ಮೂಳೆ ಸಂಪೂರ್ಣ ನುಜ್ಜುಗುಜ್ಜಾದ್ದರಿಂದ ಹೊಸ ಮೂಳೆಯನ್ನ ರಿಪ್ಲೇಸ್ ಮಾಡಲಾಗಿದೆ.