ರೈತ ಪ್ರತಿಭಟನೆಯಲ್ಲಿ ಭಾಗಿಯಾಗಲು 250 ಕಿಮೀ ಜೀಪ್ ಚಲಾಯಿಸಿದ 62ರ ವೃದ್ಧೆ..! 22-12-2020 7:04PM IST / No Comments / Posted In: Latest News, India ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ರಾಷ್ಟ್ರ ರಾಜಧಾನಿಯ ಸಿಂಘು ಗಡಿಯಲ್ಲಿ ರೈತರ ಹೋರಾಟ ಮುಂದುವರಿದಿದೆ. ರೈತರ ಪ್ರತಿಭಟನೆಗೆ ಸಾಥ್ ನೀಡಲು ನಿರ್ಧರಿಸಿದ ಪಂಜಾಬ್ನ ಪಟಿಯಾಲ ಮೂಲದ 62 ವರ್ಷದ ಮಂಜೀತ್ ಕೌರ್ ತನ್ನ ಗೆಳತಿಯರನ್ನೂ ಜೀಪ್ನಲ್ಲಿ ಕೂರಿಸಿಕೊಂಡು ಸ್ವತಃ 250 ಕಿಲೋಮೀಟರ್ವರೆಗೆ ಜೀಪ್ನ ಚಲಾಯಿಸಿದ್ದಾರೆ. ರೈತರ ಪ್ರತಿಭಟನೆಯ ವಿಡಿಯೋಗಳನ್ನ ನಿರಂತರವಾಗಿ ಶೇರ್ ಮಾಡುವ ಕಿಸಾನ್ ಏಕ್ತಾ ಮೋರ್ಚಾ ಟ್ವಿಟರ್ ಖಾತೆಯಲ್ಲಿ ಮಂಜಿತ್ ಕೌರ್ ಜೀಪ್ ಚಲಾಯಿಸುತ್ತಿರುವ ಫೋಟೋಗಳನ್ನ ಶೇರ್ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಫೋಟೋವನ್ನ ಬಾಲಿವುಡ್ ನಟಿ ತಾಪ್ಸಿ ಪನ್ನು ರಿಟ್ವೀಟ್ ಮಾಡಿದ್ದು ಚಕ್ ದೇ ಫಟ್ಟೆ ಎಂಬ ಶೀರ್ಷಿಕೆಯನ್ನ ನೀಡಿದ್ದಾರೆ. ಅಲ್ಲದೇ ಈ ಫೋಟೋ ನೋಡಿದ ಬಹುತೇಕ ಎಲ್ಲ ಟ್ವೀಟಿಗರು ಮಂಜಿತ್ ಕೌರ್ ಉತ್ಸಾಹವನ್ನ ಪ್ರಶಂಸಿಸಿದ್ದಾರೆ. 62-year-old Manjeet Kaur drove from Patiala to #SinghuBorder to join #farmersprotest Image courtesy: @KisanEktaMarch pic.twitter.com/WrBv1PBQPZ — NDTV (@ndtv) December 22, 2020