ಸ್ಮಾರ್ಟ್ಫೋನ್ ಇಂದು ಭಾರತದ ಮೂಲೆ ಮೂಲೆ ತಲುಪಿದೆ. ಸಾಮಾಜಿಕ ಜಾಲತಾಣಗಳ ಬಳಕೆ ಕೂಡ ಹೆಚ್ಚಾಗಿದೆ. ಈ ಅಪ್ಲಿಕೇಶನ್‌ಗಳ ಬಳಕೆಯ ಕುರಿತು ಸಮೀಕ್ಷೆಯೊಂದು ಆಘಾತಕಾರಿ ವಿಷ್ಯ ಬಹಿರಂಗಪಡಿಸಿದೆ.
ಭಾರತದಲ್ಲಿ ಶೇಕಡಾ 19ರಷ್ಟು ಮಹಿಳೆಯರು ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಸಂಗಾತಿಯನ್ನು ಹುಡುಕುತ್ತಿದ್ದಾರಂತೆ. ದೀರ್ಘ ಅಥವಾ ಕಡಿಮೆ ಅವಧಿಗೆ ಪಾಲುದಾರರನ್ನು ಹುಡುಕುತ್ತಾರೆಂದು ಸಮೀಕ್ಷೆ ಹೇಳಿದೆ. ಭಾರತದಲ್ಲಿ ಈ ಪ್ರಮಾಣವು ಶೇಕಡಾ 19 ರಷ್ಟಿದ್ದರೆ, ಜಾಗತಿಕವಾಗಿ ಇದು ಶೇಕಡಾ 21 ರಷ್ಟಿದೆ.
ಭಾರತದಲ್ಲಿ ಸ್ಮಾರ್ಟ್ ಫೋನ್‌ಗಳನ್ನು ಬಳಸುವ ಶೇಕಡಾ 62 ರಷ್ಟು ಮಹಿಳೆಯರು ಸೆಕ್ಸ್ ಟೆಕ್ಸ್ಟಿಂಗ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರಂತೆ. ಅಂದ್ರೆ ಮೊಬೈಲ್ ನಿಂದ ಯಾರಿಗಾದರೂ ಮಾದಕ ಚಿತ್ರಗಳು ಮತ್ತು ಸಂದೇಶಗಳನ್ನು ಕಳುಹಿಸುತ್ತಾರಂತೆ. ಅಂತರಾಷ್ಟ್ರೀಯ ಅಧ್ಯಯನ ರುಚಿಕಾ ಯುನಿಯಾಲ್ ವರದಿಯಲ್ಲಿ ಈ ವಿಷಯ ಬಹಿರಂಗಗೊಂಡಿದೆ.
ಈ ವಾರ ಸಮೀಕ್ಷೆ ನಡೆದಿದೆ. 191 ದೇಶಗಳ ಮಹಿಳೆಯರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರಂತೆ. ಒಟ್ಟು 1,30,885 ಮಹಿಳೆಯರ ಪೈಕಿ 23,093 ಮಹಿಳೆಯರು ಭಾರತೀಯರು. ಆನ್‌ಲೈನ್ ಪ್ರಶ್ನೆಗಳ ಆಧಾರದ ಮೇಲೆ ಮಹಿಳೆಯರು ಪ್ರತಿಕ್ರಿಯೆ ನೀಡಿದ್ದಾರೆ.
ಸಮೀಕ್ಷೆಯ ಅಂಕಿ-ಅಂಶಗಳ ಪ್ರಕಾರ, 4,362 ಮಹಿಳೆಯರಲ್ಲಿ ಶೇಕಡಾ 19 ರಷ್ಟು ಜನರು ಪಾಲುದಾರರನ್ನು ಹುಡುಕಲು ಮೊಬೈಲ್ ಅಪ್ಲಿಕೇಶನ್ ಗಳನ್ನು ಬಳಸುವುದಾಗಿ ಒಪ್ಪಿಕೊಂಡಿದ್ದಾರೆ. ಈ ಮಹಿಳೆಯರ ವಯಸ್ಸು 18 ವರ್ಷದಿಂದ 54 ವರ್ಷಗಳು.
ಶೇಕಡಾ 44 ರಷ್ಟು ಮಹಿಳೆಯರು ಅಲ್ಪಾವಧಿಗೆ ಡೇಟಿಂಗ್ ಪಾಲುದಾರರನ್ನು ಹುಡುಕುತ್ತಾರಂತೆ. ಶೇಕಡಾ 37 ರಷ್ಟು ಮಹಿಳೆಯರು ದೀರ್ಘಾವಧಿಯ ಸಂಬಂಧಗಳಿಗಾಗಿ ಸಂಗಾತಿ ಹುಡುಕುತ್ತಾರಂತೆ. ಭಾರತದಲ್ಲಿ ಶೇಕಡಾ 13ರಷ್ಟು ಮಹಿಳೆಯರು ಲೈಂಗಿಕತೆಯ ಬಗ್ಗೆ ಓದಲು ಮತ್ತು ಕಲಿಯಲು ಆ್ಯಪ್ ಬಳಸುತ್ತಾರಂತೆ. ಶೇಕಡಾ 28 ರಷ್ಟು ಜನರು ಲೈಂಗಿಕ ಚಟುವಟಿಕೆಯ ಬಗ್ಗೆ ಮಾಹಿತಿ ಪಡೆಯಲು ಅಪ್ಲಿಕೇಷನ್ ಬಳಸ್ತಾರಂತೆ.