alex Certify ಜನ್ಮದಿನದಂದು ಕುಟುಂಬಸ್ಥರ ಬಳಿ ಅರ್ಥಪೂರ್ಣ ಉಡುಗೊರೆ ಕೇಳಿದ ಪುಟ್ಟ ಬಾಲಕಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನ್ಮದಿನದಂದು ಕುಟುಂಬಸ್ಥರ ಬಳಿ ಅರ್ಥಪೂರ್ಣ ಉಡುಗೊರೆ ಕೇಳಿದ ಪುಟ್ಟ ಬಾಲಕಿ..!

ಮಕ್ಕಳಿಗೆ ಹುಟ್ಟಿದ ಹಬ್ಬ ಅಂದರೆ ಸಂಭ್ರಮವೇ ಸರಿ. ಕೇಕ್​ ಕಟ್​ ಮಾಡೋದು, ಸ್ನೇಹಿತರ ಜೊತೆ ಸೇರಿ ಮಜಾ ಮಾಡೋದು…..ಹೀಗೆ ಮಕ್ಕಳು ಜನ್ಮದಿನವನ್ನ ತುಂಬಾನೇ ಎಂಜಾಯ್​ ಮಾಡ್ತಾರೆ. ಆದರೆ ಮಹಾರಾಷ್ಟ್ರದ 6 ವರ್ಷದ ಬಾಲಕಿ ಮಾತ್ರ ತನ್ನ ಜನ್ಮದಿನಾಚರಣೆಯನ್ನ ಬಹಳ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾಳೆ.

ಗಂದ್ರೆ ಎಂಬ ಗ್ರಾಮದ ನಿವಾಸಿಯಾಗಿರುವ ಯುಗಾ ಅಮೋಲ್​ ಠಾಕ್ರೆ ಎಂಬಾಕೆ ತನ್ನ ಜನ್ಮದಿನದಂದು ಕೇಕ್​ ಕತ್ತರಿಸೋದ್ರ ಬದಲಾಗಿ ಕುಟುಂಬಸ್ಥರಿಗೆ ರಕ್ತದಾನ ಮಾಡುವಂತೆ ಪ್ರೇರಪಣೆ ನೀಡಿದ್ದಾಳೆ.

ರಕ್ತದಾನ ಮಾಡುವಂತೆ ಮಾಧ್ಯಮಗಳಲ್ಲಿ ಮಾಡಲಾಗುತ್ತಿದ್ದ ಮನವಿಗಳನ್ನ ನೋಡಿದ್ದ ಯುಗಾ, ಕುಟುಂಬಸ್ಥರ ಬಳಿ ನನಗೆ ಯಾವುದೇ ಕೇಕ್​ ಹಾಗೂ ಉಡುಗೊರೆಗಳು ಬೇಡ. ಬದಲಾಗಿ ನನಗಾಗಿ ರಕ್ತದಾನ ಮಾಡಿ ಎಂದು ಮನವಿ ಮಾಡಿದ್ದಾಳೆ.

ಈ ಪುಟ್ಟ ಬಾಲಕಿಯ ಮನವಿಗೆ ಸ್ಪಂದಿಸಿದ ಆಕೆಯ ಕುಟುಂಬಸ್ಥರು ಹಾಗೂ ಕುಟುಂಬದ ಆಪ್ತರು ಸೇರಿದಂತೆ ಒಟ್ಟು 36 ಮಂದಿ ಕಲ್ಯಾಣಿ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಬಾಲಕಿಯ ಈ ನಿರ್ಧಾರ ಮೆಚ್ಚುವಂತದ್ದೇ ಎಂದು ಡಾ. ವೈಭವ್​ ಠಾಕ್ರೆ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...