alex Certify ರೈತ ಮುಖಂಡರಿಗೆ ಯುಪಿ ಪೊಲೀಸರಿಂದ ನೋಟೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತ ಮುಖಂಡರಿಗೆ ಯುಪಿ ಪೊಲೀಸರಿಂದ ನೋಟೀಸ್

ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಶಾಂತಿ ಉಲ್ಲಂಘನೆ ಬಗ್ಗೆ ಪೊಲೀಸ್​ ವರದಿಯಲ್ಲಿ ಎಚ್ಚರಿಕೆ ನೀಡಿದ್ದರಿಂದ ಉತ್ತರ ಪ್ರದೇಶದ ಸಂಭಾಲ್​ ಜಿಲ್ಲಾಡಳಿತ ಆರು ಮಂದಿ ರೈತ ಮುಖಂಡರಿಗೆ ತಲಾ 50 ಸಾವಿರ ಮೌಲ್ಯದ ವೈಯಕ್ತಿಕ ಬಾಂಡ್​ಗಳನ್ನ ಸಲ್ಲಿಸುವಂತೆ ಸೂಚಿಸಿ ನೋಟಿಸ್​ ನೀಡಿದೆ.

ಭಾರತೀಯ ಕಿಸಾನ್​ ಯೂನಿಯನ್​ ಜಿಲ್ಲಾಧ್ಯಕ್ಷ ರಾಜ್​ಪಾಲ್​ ಸಿಂಗ್​ ಯಾದವ್​, ರೈತ ಮುಖಂಡರಾದ ಜೈ ವೀರ್​ ಸಿಂಗ್​, ಬ್ರಹ್ಮಚಾರಿ ಯಾದವ್​, ರೌದಾಸ್​ ಹಾಗೂ ವೀರ್​ ಸಿಂಗ್​ ಎಂಬವರಿಗೆ ಈ ನೋಟಿಸ್​ ನೀಡಲಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಮಸೂದೆ ವಿರೋಧಿಸಿ ರೈತರು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಹಯಾತ್​​ನಗರ ಠಾಣಾ ವ್ಯಾಪ್ತಿಯ ಕೆಲ ವ್ಯಕ್ತಿಗಳು ರೈತರಿಗೆ ಪ್ರಚೋದನೆ ನೀಡುತ್ತಿದ್ದಾರೆ. ಪ್ರತಿಭಟನೆಯಿಂದಾಗಿ ಜಿಲ್ಲೆಯಲ್ಲಿ ಶಾಂತಿ ಉಲ್ಲಂಘನೆ ಆಗಬಾರದು ಹೀಗಾಗಿ ನಾವು ರೈತರಿಂದ ಬಾಂಡ್​ ಪಡೆದುಕೊಂಡಿದ್ದೇವೆ ಎಂದು ಉಪವಿಭಾಗ ಮ್ಯಾಜಿಸ್ಟ್ರೇಟ್​ ದೀಪೇಂದ್ರ ಯಾದವ್​ ಹೇಳಿದ್ದಾರೆ. ರೈತರಿಗೆ ಮೊದಲು ಬರೋಬ್ಬರಿ 50 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್​ ನೀಡುವಂತೆ ಸೂಚನೆ ನೀಡಲಾಗಿತ್ತು. ಆದರೆ ಈ ಮೊತ್ತ ಸಿಕ್ಕಾಪಟ್ಟೆ ಜಾಸ್ತಿ ಇದೆ ಎಂದು ರೈತರು ಮನವಿ ಮಾಡಿಕೊಂಡ ಬಳಿಕ ಬಾಂಡ್​ ಮೌಲ್ಯವನ್ನ 50 ಸಾವಿರ ರೂಪಾಯಿಗೆ ಇಳಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...