ದೇಶಾದ್ಯಂತ ಕೋವಿಡ್ ಪೀಡಿತರ ಸಂಖ್ಯೆ ಏರಿಕೆಯ ದರದಲ್ಲಿ ಇಳಿಮುಖ ಕಾಣುತ್ತಿದ್ದು, ದಿನನಿತ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಆದರೂ ಸಹ ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ತಮಿಳುನಾಡು, ಪಂಜಾಬ್, ದೆಹಲಿಗಳಲ್ಲಿ ಕೋವಿಡ್ ಸಂಬಂಧಿ ಸಾವಿನ ಸಂಖ್ಯೆಗಳು ಹೆಚ್ಚಿವೆ ಎಂದು ತಿಳಿದುಬಂದಿದೆ. ಈ ರಾಜ್ಯಗಳಲ್ಲಿ ಪ್ರತಿನಿತ್ಯ 10,000ಕ್ಕೂ ಅಧಿಕ ಸಕ್ರಿಯ ಪ್ರಕರಣಗಳು ದಾಖಲಾಗುತ್ತಿದ್ದು, ಆರು ರಾಜ್ಯಗಳಲ್ಲಿ 5,000-10,000 ಪ್ರಕರಣಗಳು ದಾಖಲಾಗುತ್ತಿವೆ.
ಲಾಕ್ ಡೌನ್ ಹೊತ್ತಲ್ಲಿ ಆನ್ಲೈನ್ ಮೂಲಕ ವಸ್ತುಗಳನ್ನು ತರಿಸಿಕೊಳ್ಳುವವರಿಗೆ ‘ಬಿಗ್ ಶಾಕ್’
ಎಂಟು ರಾಜ್ಯಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕೋವಿಡ್-19 ಸಕ್ರಿಯ ಪ್ರಕರಣಗಳಿದ್ದು, 18 ರಾಜ್ಯಗಳಲ್ಲಿ 15%ಗೂ ಮೀರಿ ಕೋವಿಡ್-19 ಪಾಸಿಟಿವ್ ದರ ಇದೆ. ಮೇ 10ರಂದು 24.83%ನಷ್ಟಿದ್ದು ಕೋವಿಡ್ ಪಾಸಿಟಿವ್ ದರವು ಮೇ 22ರ ವೇಳೆ 12.45%ಗೆ ತಗ್ಗಿದೆ.
ಮಾರ್ಚ್ 1ರಿಂದ ಆಚೆಗೆ ಕೋವಿಶೀಲ್ಡ್ ಲಸಿಕೆ ವ್ಯರ್ಥವಾಗುವ ದರವು 8%ನಿಂದ 1%ಗೆ ತಗ್ಗಿದ್ದು, ಕೋವ್ಯಾಕ್ಸಿನ್ ವೇಸ್ಟೇಜ್ ದರವು 17%ನಿಂದ 4%ಗೆ ಇಳಿದಿದೆ.