ಉತ್ತರ ಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹುಡುಗಿಯನ್ನು ಮದುವೆಯಾಗಲು 6 ಮಂದಿ ಮೆರವಣಿಗೆ ಮೂಲಕ ವಧು ಮನೆ ತಲುಪಿದ್ದಾರೆ. ಆದ್ರೆ ಮದುವೆಯಾಗದ ಆರೂ ಮಂದಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಶಗುನ್ ಜಾನ್ ಕಲ್ಯಾಣ್ ಸೇವಾ ಸಮಿತಿಯಿಂದ ಎಲ್ಲ 6 ಮಂದಿಗೆ ಪತ್ರವೊಂದು ಬಂದಿತ್ತು. ಬಡ ಹೆಣ್ಣು ಮಕ್ಕಳ ಮದುವೆ ಬಗ್ಗೆ ಅದ್ರಲ್ಲಿ ಮಾಹಿತಿಯಿತ್ತು. ವರರು ಸೇವಾ ಸಮಿತಿಯನ್ನು ಸಂಪರ್ಕಿಸಿದ್ದಾರೆ. ಇಬ್ಬರ ನಡುವೆ ಒಪ್ಪಂದ ನಡೆದಿದೆ. ತಲಾ 20 ಸಾವಿರ ರೂಪಾಯಿಯನ್ನು ಸೇವಾ ಸಮಿತಿಗೆ ನೀಡಲಾಗಿದೆ. ನಂತ್ರ ಮದುವೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ವಧುವಿನ ಮನೆ ವಿಳಾಸ ನೀಡಲಾಗಿದೆ.
ಮದುವೆಗೆ ತಯಾರಿ ಮಾಡಿಕೊಂಡ ಬೇರೆ ಬೇರೆ ತಾಲೂಕಿನ ವರರು, ಮೆರವಣಿಗೆ ಮೂಲಕ ಮನೆಗೆ ಬಂದಿದ್ದಾರೆ. ಆದ್ರೆ ವಧು ಮನೆಯಲ್ಲಿ ಯಾರೂ ಇರಲಿಲ್ಲ. ಮನೆ ಬೀಗ ಹಾಕಿತ್ತು. ಫೋನ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ವರರು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ವಧು ತಾಯಿ ಹೆಸರು ಪತ್ತೆಯಾಗಿದ್ದು, ಆಕೆ ವಿಚಾರಣೆಗೆ ಪೊಲೀಸರು ಮುಂದಾಗಿದ್ದಾರೆ.