alex Certify 5G ಇಂಟರ್ನೆಟ್‌ ಸೇವೆಗಾಗಿ ಕಾಯುತ್ತಿರುವ ಏರ್ಟೆಲ್‌ ಗ್ರಾಹಕರಿಗೆ ಗುಡ್‌ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

5G ಇಂಟರ್ನೆಟ್‌ ಸೇವೆಗಾಗಿ ಕಾಯುತ್ತಿರುವ ಏರ್ಟೆಲ್‌ ಗ್ರಾಹಕರಿಗೆ ಗುಡ್‌ ನ್ಯೂಸ್

ಹಲವು ವರ್ಷಗಳ ಕಾಯುವಿಕೆಯ ನಂತರ ಭಾರತೀಯರಿಗೆ ಕೊನೆಗೂ 5G ಇಂಟರ್ನೆಟ್‌ ಸೇವೆ ಸಿಕ್ತಾ ಇದೆ. ಭಾರತದ ಮೂರು ಪ್ರಮುಖ ಟೆಲಿಕಾಂ ಆಪರೇಟರ್‌ಗಳಲ್ಲಿ ಒಂದಾದ ಭಾರ್ತಿ ಏರ್‌ಟೆಲ್ 5ಜಿ ಇಂಟರ್ನೆಟ್‌ ಸೇವೆಯನ್ನು ಲಾಂಚ್‌ ಮಾಡಲು ಸಮಯ ನಿಗದಿಪಡಿಸಿದೆ. ಆಗಸ್ಟ್‌ ತಿಂಗಳಾಂತ್ಯದೊಳಗೆ ದೇಶದಲ್ಲಿ 5G ಸೇವೆಗಳನ್ನು ಆರಂಭಿಸುವುದಾಗಿ ಏರ್ಟೆಲ್‌ ದೃಢಪಡಿಸಿದೆ.

ಈಗಾಗ್ಲೇ ನೆಟ್‌ವರ್ಕ್ ಒಪ್ಪಂದಗಳೂ ಅಂತಿಮಗೊಂಡಿದ್ದು, ಗ್ರಾಹಕರಿಗೆ 5G ಸಂಪರ್ಕದ ಸಂಪೂರ್ಣ ಪ್ರಯೋಜನಗಳನ್ನು ತಲುಪಿಸಲು ಏರ್‌ಟೆಲ್ ಪ್ರಪಂಚದಾದ್ಯಂತದ ಅತ್ಯುತ್ತಮ ತಂತ್ರಜ್ಞಾನ ಪಾಲುದಾರರೊಂದಿಗೆ ಕೆಲಸ ಮಾಡುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಟ್ರಾ ಹೈಸ್ಪೀಡ್, ಕಡಿಮೆ ಲೇಟೆನ್ಸಿ ಮತ್ತು ಹೆಚ್ಚಿನ ಪ್ರಮಾಣದ ಡೇಟಾ ಹ್ಯಾಂಡ್ಲಿಂಗ್ ಸಾಮರ್ಥ್ಯಗಳನ್ನು ಹೊಂದಿರುವ 5G ಸೇವೆಗಳನ್ನು ಏರ್ಟೆಲ್‌ ಬಿಡುಗಡೆ ಮಾಡಲಿದೆ.

ದೇಶದಲ್ಲಿ 5G ಸೇವೆ ನೀಡಲು ಏರ್‌ಟೆಲ್ ಕಂಪನಿ, ಎರಿಕ್ಸನ್‌, ನೋಕಿಯಾ ಮತ್ತು ಸ್ಯಾಮ್‌ಸಂಗ್ ಸಂಸ್ಥೆಗಳ ಜೊತೆ ನೆಟ್‌ವರ್ಕ್ ಪಾಲುದಾರರಾಗಿ ಒಪ್ಪಂದ ಮಾಡಿಕೊಂಡಿದೆ. ಭಾರತದಲ್ಲಿ ಟೆಲಿಕಾಂ ಇಲಾಖೆ ನಡೆಸಿದ ಇತ್ತೀಚಿನ ಸ್ಪೆಕ್ಟ್ರಮ್ ಹರಾಜಿನ ಬೆನ್ನಲ್ಲೇ ಏರ್ಟೆಲ್‌ ಗ್ರಾಹಕರಿಗೆ ಈ ಸಿಹಿಸುದ್ದಿ ಸಿಕ್ಕಿದೆ. ಭಾರ್ತಿ ಏರ್‌ಟೆಲ್ 900 MHz, 1800 MHz, 2100 MHz, 3300 GHz, ಮತ್ತು 26 ಆವರ್ತನದಲ್ಲಿ 19867.8 MHZ ಸ್ಪೆಕ್ಟ್ರಮ್ ಅನ್ನು ಹರಾಜಿನಲ್ಲಿ ಸ್ವಾಧೀನಪಡಿಸಿಕೊಂಡಿತ್ತು.

ಈ ಮಧ್ಯೆ 5G ಸೇವೆ ಬಿಡುಗಡೆಯಲ್ಲಿ ಏರ್ಟೆಲ್‌ಗೆ ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾ ಪೈಪೋಟಿ ನೀಡುವ ಯಾವುದೇ ಸೂಚನೆಗಳಿಲ್ಲ. ಯಾಕಂದ್ರೆ 5ಜಿ ಸೇವೆ ಲಾಂಚ್‌ ಬಗ್ಗೆ ಈ ಕಂಪನಿಗಳು ಯಾವುದೇ ಮಾಹಿತಿ ನೀಡಿಲ್ಲ. ಮೂಲಗಳ ಪ್ರಕಾರ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ, ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಆಗಸ್ಟ್ 15 ರಂದು ಜಿಯೋ 5ಜಿ ಸೇವೆಗಳನ್ನು ಘೋಷಿಸಲಿದ್ದಾರೆ ಅಂತಾ ಹೇಳಲಾಗ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...