ಒಡಿಶಾದಲ್ಲಿ ದಂಗಾಗಿಸುವ ಘಟನೆ ನಡೆದಿದೆ. 500 ರೂಪಾಯಿಗಾಗಿ ಮಗನ ಸ್ನೇಹಿತನನ್ನೇ ತಾಯಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಮಯೂರ್ಭಂಜ್ ಜಿಲ್ಲೆಯ ಕರಂಜಿಯಾ ಪೊಲೀಸ್ ಠಾಣೆ ಪ್ರದೇಶದ ಕಿಪ್ನೋಪೊಶಿ ಗ್ರಾಮದಲ್ಲಿ 14 ವರ್ಷದ ಬಾಲಕನನ್ನು ಸ್ನೇಹಿತನ ತಾಯಿ ಥಳಿಸಿದ್ದಾಳೆ. 7ನೇ ತರಗತಿ ಬಾಲಕ ರಾಜನ್ ಸ್ನೇಹಿತನ ಮನೆಗೆ ಬಂದಿದ್ದನಂತೆ. ಆತ ಬಂದು ಹೋದ್ಮೇಲೆ ಮನೆಯಲ್ಲಿದ್ದ 500 ರೂಪಾಯಿ ಕಾಣೆಯಾಗಿತ್ತಂತೆ.
ತಾಯಿ ಮೊದಲು ಮಗನನ್ನು ವಿಚಾರಿಸಿದ್ದಾಳೆ. ನಂತ್ರ ರಾಜನ್ ಕರೆದು ಕೇಳಿದ್ದಾಳೆ. ಕೋಪಗೊಂಡ ಶಮಿತಾ, ರಾಜನ್ ಗೆ ಹೊಡೆದಿದ್ದಾಳೆ. ಹೊಡೆತ ತಿಂದು ಮನೆಗೆ ಹೋದ ರಾಜನ್ ಆರೋಗ್ಯದಲ್ಲಿ ಏರುಪೇರಾಗಿದೆ. ಆಸ್ಪತ್ರೆಗೆ ದಾಖಲಿಸುವ ಮೊದಲೇ ಸಾವನ್ನಪ್ಪಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಮಿತಾಳನ್ನು ಬಂಧಿಸಿದ್ದಾರೆ.