ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿರುವ ವಜ್ರದ ಗಣಿಯಲ್ಲಿ ವಜ್ರದ ಹರಳೊಂದು ಪತ್ತೆಯಾಗಿದೆ. ಈ ವಜ್ರದ ಹರಳು ಸುಮಾರು 11 ಕ್ಯಾರಟ್ ಇದೆ ಎನ್ನಲಾಗಿದೆ. ಈ ವಜ್ರದ ಹರಳಿನ ಬೆಲೆ ಕೇಳಿದರೆ ನಿಜಕ್ಕೂ ಶಾಕ್ ಆಗೋದು ಗ್ಯಾರಂಟಿ.
ಹೌದು, ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ರಾಣಿಪುರ್ ಪ್ರದೇಶದಲ್ಲಿ ವಜ್ರದ ಹರಳಿನ ಗಣಿ ಇದೆ. ಇದನ್ನು ಆನಂದಿಲಾಲ್ ಕುಶ್ವಾ ಎಂಬುವರಿಗೆ ಗುತ್ತಿಗೆ ನೀಡಲಾಗಿದ್ದು, ಈ ಗಣಿಯಲ್ಲಿಯೇ ಭಾರೀ ಮೌಲ್ಯದ ಹರಳು ಪತ್ತೆಯಾಗಿರುವುದಾಗಿ ಅಧಿಕಾರಿ ಆರ್.ಕೆ. ಪಾಂಡೆ ಹೇಳಿದ್ದಾರೆ.
ಇನ್ನು ಈ ವಜ್ರದ ಹರಳಿನ ಬೆಲೆ 50 ಲಕ್ಷಕ್ಕೂ ಅಧಿಕ ಎಂದು ಹೇಳಲಾಗುತ್ತಿದೆ. ಸದ್ಯ ಈ ಹರಳನ್ನು ಪನ್ನಾದಲ್ಲಿರುವ ಹೀರಾ ಕಾರ್ಯಾಲಯಕ್ಕೆ ಸಲ್ಲಿಸಲಾಗಿದೆಯಂತೆ. ಇದನ್ನು ಹರಾಜು ಹಾಕಲಾಗುತ್ತಿದ್ದು, ಬಂದ ಹಣದಲ್ಲಿ ಸರ್ಕಾರಿ ರಾಯಲ್ಟಿ ಮತ್ತು ತೆರಿಗೆಯನ್ನು ಕಡಿತಗೊಳಿಸಿ ಉಳಿದ ಮೊತ್ತವನ್ನು ಸರ್ಕಾರಕ್ಕೆ ಸಲ್ಲಿಸಿದ ವ್ಯಕ್ತಿಗೆ ಕೊಡಲಾಗುತ್ತದೆ.