ಪೊಲೀಸರು, ಪೊಲೀಸ್ ಠಾಣೆಯೆಂದರೆ ಒಂದು ಕ್ಷಣ ಯಾರಿಗಾದರೂ ಭಯವಾಗುವುದು ಸಹಜ. ಅದರಲ್ಲೂ ಮಕ್ಕಳಿಗೆ ಪೊಲೀಸರ ಹೆಸರು ಹೇಳಿದರೆ ಇನ್ನಿಲ್ಲದ ಆತಂಕ….ಹೀಗಿರುವಾಗ ಇಲ್ಲೋರ್ವ ಪುಟ್ಟ ಬಾಲಕ ತನ್ನ ತಂದೆಯ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿರುವ ಘಟನೆ ನಡೆದಿದೆ.
5 ವರ್ಷದ ಬಾಲಕನೊಬ್ಬ ಪೊಲೀಸ್ ಠಾಣೆಗೆ ತೆರಳಿ ತನ್ನ ತಂದೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ತಂದೆಯ ವಿರುದ್ಧ ಪುಟ್ಟ ಬಾಲಕ ದೂರು ನೀಡಲು ಕಾರಣವೇನೆಂದು ಕೇಳಿದ ಪೊಲೀಸ್ ಅಧಿಕಾರಿ ದಂಗಾಗಿದ್ದಾರೆ.
ಮಗುವಿನ ತಂದೆ ಬೀದಿಯಲ್ಲಿ, ರಸ್ತೆಯಲ್ಲಿ ಆಟವಾಡಬೇಡ, ನದಿಗೆ ಹೋಗಬೆಡ ಎಂದು ಗದರುತ್ತಾರಂತೆ. ಇದರಿಂದ ನೊಂದ ಬಾಲಕ ತನ್ನ ತಂದೆ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಬಾಲಕ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಪೊಲೀಸ್ ಅಧಿಕಾರಿ ಯಾರ ವಿರುದ್ಧ ದೂರು ನೀಡಬೇಕು? ಎಂದು ಕೇಳಿದಾಗ ಬಾಲಕ ನನ್ನ ಹೆಸರು ಹಸನೈನ್. ತಂದೆ ಇಕ್ಬಾಲ್. ತನ್ನ ತಂದೆ ನನಗೆ ನದಿಗೆ ಹೋಗಂದತೆ, ಬೀದಿಯಲ್ಲಿ ಆಡದಂತೆ ತಡೆದು ಬೈಯ್ಯುತ್ತಾರೆ, ಹೊಡೆಯುತ್ತಾರೆ ಎಂದು ಕಣ್ಣೀರಿಟ್ಟಿದ್ದಾನೆ. ಹಾಗಾಗಿ ತಂದೆಯ ವಿರುದ್ಧ ದೂರು ನಿಡುತ್ತಿದ್ದೇನೆ. ಅವರನ್ನು ವಿಚಾರಣೆ ಮಾಡಿ ಜೈಲಿಗೆ ಹಾಕಿ ಎಂದಿದ್ದಾನೆ. ಪೊಲೀಸ್ ಅಧಿಕಾರಿ ತಾನು ವಿಚಾರಿದ್ಸುವುದಾಗಿ ಹೇಳಿದ್ದಾರೆ. ದೂರು ನೀಡಿದ ಬಾಲಕ ಪೊಲೀಸ್ ಠಾಣೆಯಿಂದ ತೆರಳಿದ್ದಾನೆ. ಬಾಲಕನ ಹೇಳಿಕೆ ಕೇಳಿ ಪೊಲೀಸ್ ಸಿಬ್ಬಂದಿ ಅರೆಕ್ಷಣ ಶಾಕ್ ಆದರೂ ನಕ್ಕಿದ್ದಾರೆ.