ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 2013ರಲ್ಲಿ ಭೇಟಿ ಕೊಟ್ಟಿದ್ದ ಅಮೆರಿಕದ ಅಧ್ಯಕ್ಷ ಜೋ ಬಿಡೆನ್, ಮಾಯಾನಗರಿಯಲ್ಲಿ ತಮ್ಮ ದೂರದ ಬಂಧುಗಳು ಇರುವುದಾಗಿ ತಿಳಿಸಿದ್ದಾರೆ.
ಅಮೆರಿಕದ 46ನೇ ಅಧ್ಯಕ್ಷರಾಗಿ ಚುನಾಯಿತರಾಗಿರುವ 77ರ ಬಿಡೆನ್, ಇದೇ ಮಾತನ್ನು ಎರಡು ವರ್ಷಗಳ ಬಳಿಕ ವಾಷಿಂಗ್ಟನ್‌ನಲ್ಲಿ ಪುನರುಚ್ಛರಿಸಿದ್ದರು. ಆದರೆ ಅವರೀಗ ಅಧ್ಯಕ್ಷರಾದ ಬಳಿಕವೂ ಸಹ ಮುಂಬೈಯಿಂದ ಯಾರೊಬ್ಬರೂ ಕೂಡಾ ತಾವು ಬಿಡೆನ್ ಸಂಬಂಧಿ ಎಂದು ಹೇಳಿಕೊಂಡು ಮುಂದೆ ಬಂದಿಲ್ಲ.
ಸಾಕಷ್ಟು ತಲೆಮಾರುಗಳಷ್ಟು ಹಿಂದಿನ ತಮ್ಮ ಪೂರ್ವಜರು ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಿಕೊಂಡಿರುವ ಬಿಡೆನ್, “ಮುಂಬೈಯಲ್ಲಿ ಐವರು ಬಿಡೆನ್‌ಗಳು ಇದ್ದಾರೆ” ಎಂದು 2015ರಲ್ಲಿ ವಾಷಿಂಗ್ಟ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದರು.
2013ರಲ್ಲಿ ಅಮೆರಿಕ ಉಪಾಧ್ಯಕ್ಷರಾಗಿ ಮೊದಲ ಬಾರಿಗೆ ಮುಂಬೈಗೆ ಭೇಟಿ ಕೊಟ್ಟಿದ್ದರು ಬಿಡೆನ್. ತಮ್ಮ ಮುಂಬೈ ನಂಟಿನ ಬಗ್ಗೆ ಅಲ್ಲಿನ ಶೇರು ಮಾರುಕಟ್ಟೆಯಲ್ಲಿ ಮಾತನಾಡುವ ವೇಳೆ ಬಿಡಿಸಿ ಹೇಳಿದ್ದರು ಬಿಡೆನ್.
1972ರಲ್ಲಿ ಅಮೆರಿಕ ಸೆನೆಟ್‌ಗೆ ಮೊದಲ ಬಾರಿಗೆ ಆಯ್ಕೆಯಾದ ವೇಳೆ ಮುಂಬೈಯಿಂದ ’ಬಿಡೆನ್’ ಸರ್ ನೇಮ್‌ನ ವ್ಯಕ್ತಿಯೊಬ್ಬರು ತಮಗೆ ಪತ್ರ ಬರೆದು ತಮ್ಮೊಂದಿಗಿನ ನಂಟಿನ ಬಗ್ಗೆ ಉಲ್ಲೇಖಿಸಿದ್ದರು ಎಂದು ಬಿಡೆನ್ ಆ ವೇಳೆ ತಿಳಿಸಿದ್ದರು.
ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕೆಲಸ ಮಾಡಿದ ತಮ್ಮ ಪೂರ್ವಜರೊಬ್ಬರು ಭಾರತೀಯ ಮಹಿಳೆಯೊಬ್ಬರನ್ನು ಮದುವೆಯಾಗಿ ಅಲ್ಲೇ ನಿವೃತ್ತ ಜೀವನ ಸಾಗಿಸಿದ್ದರು ಎಂದು ವಾಷಿಂಗ್ಟನ್‌ನ ಸಭೆಯ ವೇಳೆ ಬಿಡೆನ್ ತಿಳಿಸಿದ್ದರು.