ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರಲ್ಲಿ ಅರ್ಧದಷ್ಟು ಮಂದಿ ಮನೆ ನಿರ್ವಹಣೆಗೂ ಹಣವಿಲ್ಲದ ಕಾರಣ ಸಾಲದ ಮೊರೆ ಹೋಗಿದ್ದಾರೆ ಎಂಬ ಅಂಶ ಅಧ್ಯಯನವೊಂದರಿಂದ ಬಯಲಾಗಿದೆ.
ಕೈಗಾರಿಕೆಗಳಲ್ಲಿ ಉದ್ಯೋಗ ನಷ್ಟ ಹಾಗೂ ವೇತನ ಕಡಿತದ ಬರೆಯಿಂದಾಗಿ ಕಡಿಮೆ ಹಾಗೂ ಮಧ್ಯಮ ಪ್ರಮಾಣದ ಆದಾಯ ಪಡೆಯುತ್ತಿದ್ದ ಪರಿವಾರಗಳು ಸಂಕಷ್ಟಕ್ಕೆ ಸಿಲುಕಿವೆ.
ಹೀಗಾಗಿ ಇಂತಹ ಕುಟುಂಬಗಳು ಸಾಲದ ಮೊರೆ ಹೋಗಿವೆ ಅಂತಾ ಹೋಂ ಕ್ರೆಡಿಟ್ ಇಂಡಿಯಾ ವರದಿ ಮಾಡಿದೆ. ಈ ಸಮೀಕ್ಷೆಯ ಪ್ರಕಾರ ಶೇಕಡಾ 46ರಷ್ಟು ಮಂದಿ ಮನೆ ನಿರ್ವಹಣೆ ಮಾಡಲು ಸಾಲ ಪಡೆದಿದ್ದಾರಂತೆ. ದೇಶದ 7 ನಗರಗಳಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಈ ಅಂಶ ಬಯಲಾಗಿದೆ.