ಲಾಕ್ಡೌನ್ ಹಾಗೂ ಕೋವಿಡ್ 19ನಿಂದಾಗಿ ಉಂಟಾದ ನಿರ್ಬಂಧಗಳು ದೇಶದಲ್ಲಿ ದಲಿತರು ಹಾಗೂ ಮುಸ್ಲಿಮರ ಮೇಲೆ ಅತಿ ಹೆಚ್ಚು ಕಠಿಣ ಪರಿಣಾಮ ಬೀರಿದೆ ಅಂತಾ ಹಸಿವಿನ ಕುರಿತಾಗಿ ನಡೆಸಲಾದ ಸಮೀಕ್ಷೆಯೊಂದರಿಂದ ಬಯಲಾಗಿದೆ.
ಲಾಕ್ಡೌನ್ನಿಂದಾಗಿ ಸರಾಸರಿ ನಾಲ್ವರು ದಲಿತರಲ್ಲಿ ಒಬ್ಬ ಹಾಗೂ ನಾಲ್ವರು ಮುಸ್ಲಿಮರಲ್ಲಿ ಒಬ್ಬ ಆಹಾರದ ಕೊರತೆಯಿಂದ ಬಳಲಿದ್ದಾರೆ. ಹಂಗರ್ ವಾಚ್ ಸಂಗ್ರಹಿಸಿದ ವರದಿ ಪ್ರಕಾರ ಸಾಮಾನ್ಯ ವರ್ಗದ ಜನರಲ್ಲಿ 10 ಮಂದಿ ಒಬ್ಬ ಮಾತ್ರ ಹಸಿವಿನಿಂದ ಬಳಲಿದ್ದಾನೆ ಎನ್ನಲಾಗಿದೆ.
ದೇಶದ 11 ರಾಜ್ಯಗಳಲ್ಲಿ ಸುಮಾರು 45 ಪ್ರತಿಶತದಷ್ಟು ಜನರು ತಿನ್ನಲು ಸಹ ಹಣವಿಲ್ಲದ ಕಾರಣ ಸಾಲದ ಮೊರೆ ಹೋಗಿದ್ದರಂತೆ. ಅದರಲ್ಲೂ ದಲಿತರು ಇತರರಿಗೆ ಹೋಲಿಸಿದ್ರೆ ಶೇಕಡಾ 23ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಾಲಕ್ಕೆ ಮೊರೆ ಹೋಗಿದ್ದಾರೆ ಎಂದು ವರದಿ ತಿಳಿಸಿದೆ.
ಈ ವರ್ಷದ ಸಪ್ಟೆಂಬರ್ ಹಾಗೂ ಅಕ್ಟೋಬರ್ ತನಕ 11 ರಾಜ್ಯಗಳಲ್ಲಿ ನಡೆಸಿದ ಸಮೀಕ್ಷೆ ಅನುಸಾರ ನಾಲ್ವರಲ್ಲಿ ಒಬ್ಬರು ಕೆಲವೊಮ್ಮೆ ತಿನ್ನಲು ಗತಿ ಇಲ್ಲದೇ ಸುಮ್ಮನೇ ಮಲಗುತ್ತಿದ್ದರು ಎನ್ನಲಾಗಿದೆ.
ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಚತ್ತೀಸಗಢ, ಜಾರ್ಖಂಡ್, ದೆಹಲಿ, ತೆಲಂಗಾಣ.ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಈ ಸಮೀಕ್ಷೆಯನ್ನ ನಡೆಸಲಾಗಿದೆ.