ನವದೆಹಲಿ: 2021 ರ ಜುಲೈ ವೇಳೆಗೆ ದೇಶದ 25 ಕೋಟಿ ಜನರಿಗೆ 400 ರಿಂದ 500 ಮಿಲಿಯನ್ ಕೊರೋನಾ ತಡೆ ಲಸಿಕೆ ವಿತರಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.
ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಈ ಕುರಿತಂತೆ ಮಾತನಾಡಿ, ಜುಲೈ 2021 ರ ವೇಳೆಗೆ ಸುಮಾರು 25 ಕೋಟಿ ಜನರಿಗೆ ಅಂದಾಜು 500 ಮಿಲಿಯನ್ ಡೋಸ್ ಕೊರೊನಾ ವೈರಸ್ ಲಸಿಕೆ ಬೇಕಾಗಬಹುದು ಎಂದು ಅಂದಾಜು ಮಾಡಲಾಗಿದೆ. ಲಸಿಕೆ ಸಿದ್ಧವಾದ ನಂತರ ನ್ಯಾಯಯುತ ಮತ್ತು ನ್ಯಾಯ ಸಮ್ಮತ ವಿತರಣೆ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ದೇಶದ ಪ್ರತಿಯೊಬ್ಬರಿಗೂ ಲಸಿಕೆ ನೀಡುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.