ಕೊರೋನಾ ಕುರಿತಂತೆ ವಿಶ್ವದಾದ್ಯಂತ ವಿವಿಧ ಸಂಶೋಧನೆ ಅಧ್ಯಯನಗಳು ನಡೆಯುತ್ತಿವೆ. ಇದೀಗ ಸಂಶೋಧಕಿ ಮೋನಿಕಾ ಗಾಂಧಿ ಅವರು ಕೆಲವು ವಿಚಾರಗಳಲ್ಲಿ ಅಧ್ಯಯನ ನಡೆಸಿ ಒಂದಷ್ಟು ಮಾಹಿತಿಯನ್ನು ಹೊರಹಾಕಿದ್ದಾರೆ.
ವಸತಿ ರಹಿತರ ಆಶ್ರಯತಾಣ ಬೋಸ್ಟನ್ ನಲ್ಲಿ 147 ಮಂದಿಗೆ ಕೊರೊನಾ ಸೋಂಕು ಕಾಣಿಸಿದ್ದು, ಈ ಪೈಕಿ ಶೇಕಡ 80ರಷ್ಟು ಮಂದಿಗೆ ಯಾವುದೇ ಲಕ್ಷಣಗಳು ಇರಲಿಲ್ಲ ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ. ಇದೇ ರೀತಿ ಓಹಿಯೋ ಮತ್ತು ವರ್ಜಿನಿಯಾದಲ್ಲಿ 3277 ಮಂದಿ ಸೋಂಕಿತರ ಪೈಕಿ ಶೇ. 96 ಮಂದಿಗೆ ಯಾವುದೇ ಲಕ್ಷಣ ಇರಲಿಲ್ಲ.
ಸೋಂಕಿನ ಲಕ್ಷಣಗಳಲ್ಲಿ ಇಲ್ಲದಿರುವ ಪ್ರಕರಣಗಳು ಹೆಚ್ಚಿರುವುದು ಒಳ್ಳೆಯ ಬೆಳವಣಿಗೆ. ವ್ಯಕ್ತಿಗೂ ಹಾಗೂ ಸಮಾಜಕ್ಕೂ ಇದು ಒಳಿತು ಎಂದು ಅವರು ಹೇಳಿದ್ದಾರೆ. ಇವರು ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಾಂಕ್ರಾಮಿಕ ರೋಗ ತಜ್ಞರಾಗಿದ್ದಾರೆ.