ಮುಂಬೈ: ಮಹಾರಾಷ್ಟ್ರದ ನಾದೇಂಡ್ ನ ಗುರುದ್ವಾರದಲ್ಲಿ ಹೊಲ್ಲಾ ಮೊಹಲ್ಲಾ ಮೆರವಣಿಗೆಗೆ ಅನುಮತಿ ನಿರಾಕರಿಸಿದಕ್ಕೆ ರೊಚ್ಚಿಗೆದ್ದ ಸಿಖ್ ಯುವಕರು ಕತ್ತಿ ಹಿಡಿದು ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 17 ಜನರನ್ನು ಬಂಧಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಲ್ಲಾ ಮೊಹಲ್ಲಾ ಮೆರವಣಿಗೆಗೆ ಅನುಮತಿ ನೀಡಿರಲಿಲ್ಲ. ಇದಕ್ಕೆಸಿಖ್ ಸಮಿತಿ ಕೂಡ ಒಪ್ಪಿ ಗುರುದ್ವಾರದ ಒಳಗೇ ಕಾರ್ಯಕ್ರಮ ಮಾಡುವುದಾಗಿ ಹೇಳಿತ್ತು. ಆದರೆ ನಿಯಮ ಉಲ್ಲಂಘನೆ ಮಾಡಿ ಮೆರವಣಿಗೆಗೆ ಮುಂದಾಗಿದ್ದರು. ಇದನ್ನು ಪೊಲೀಸರು ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ ಸಿಖ್ ಗುಂಪೊಂದು ಕತ್ತಿಗಳನ್ನು ಹಿಡಿದು ಗಲಾಟೆ ಆರಂಭಿಸಿದೆ. ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಗಲಾಟೆಯಲ್ಲಿ ನಾಲ್ಕು ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
ಸ್ವಯಂ ಡೆಬಿಟ್ ಪಾವತಿದಾರರಿಗೆ ಬಿಗ್ ಶಾಕ್…! ಏ.1ರಿಂದ ಜಾರಿಗೆ ಬರಲಿದೆ ಹೊಸ ನಿಯಮ
ಗಲಭೆಯಲ್ಲಿ ಗಾಯಗೊಂಡ ನಾಲ್ವರು ಪೊಲೀಸರಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಸ್ಥಿತಿ ಗಂಭೀರವಾಗಿದೆ. 6 ಪೊಲೀಸ್ ವಾಹನಗಳನ್ನು ಜಖಂಗೊಳಿಸಲಾಗಿದೆ. ಸುಮಾರು 200 ಜನರ ವಿರುದ್ಧ ಕೊಲೆಯತ್ನ ಕೇಸ್ ಅಡಿ ಎಫ್ಐಆರ್ ದಾಖಲಿಸಲಾಗಿದ್ದು, ಸಧ್ಯ 17 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಾದೇಂದ್ ಡಿಐಜಿ ನಿಸಾರ್ ತಾಂಬೋಲಿ ತಿಳಿಸಿದ್ದಾರೆ.