ಈ ಕೊರೊನಾ ವೈರಸ್‌ನಿಂದ ದೇಶಾದ್ಯಂತ ಲಾಕ್‌ಡೌನ್ ಪರಿಸ್ಥಿತಿ ನಿರ್ಮಾಣವಾದ ಕಾರಣದಿಂದ ಜನರು ಹಿಡಿಶಾಪ ಹಾಕಿಕೊಳ್ಳುತ್ತಿದ್ದರೆ, ಇತ್ತ ಹೈದರಾಬಾದ್‌ನ ವ್ಯಕ್ತಿಯೊಬ್ಬರಿಗೆ ಇದೇ ವರದಾನವಾದಂತಿದೆ.
ಮೊಹಮ್ಮದ್ ನೂರುದ್ದೀನ್ ಹೆಸರಿನ ವ್ಯಕ್ತಿಯೊಬ್ಬರು ಕಳೆದ 33 ವರ್ಷಗಳಿಂದಲೂ ಹತ್ತನೇ ತರಗತಿ ತೇರ್ಗಡೆಯಾಗಲು ನೋಡುತ್ತಿದ್ದರು. ಆದರೆ ಪ್ರತಿ ವರ್ಷವೂ ಸಹ ನಪಾಸಾಗುತ್ತಲೇ ಬಂದಿದ್ದರು ನೂರುದ್ದೀನ್. ಇಂಗ್ಲಿಷ್‌ನಲ್ಲೇ ಫೇಲ್ ಆಗುತ್ತಾ ಬಂದಿದ್ದ ಇವರು, ಈ ಕಾರಣದಿಂದ ಶಾಲಾ ಹಂತವನ್ನು ದಾಟಲು ಸಾಧ್ಯವಾಗಿರಲಿಲ್ಲ.
ಆದರೆ, ಕೊರೊನಾ ವೈರಸ್ ಕಾಟದಿಂದಾಗಿ ಈ ವರ್ಷ ಹತ್ತನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನೂ ಪಾಸ್ ಮಾಡಲು ತೆಲಂಗಾಣ ಸರ್ಕಾರ ನಿರ್ಧರಿಸಿದ ಕಾರಣ, ನೂರುದ್ದೀನ್ ಕೊನೆಗೂ ಕೊರೋನಾ ದಯೆಯಿಂದ ಪಾಸಾಗಿದ್ದಾರೆ. 1987ರಿಂದಲೂ ಪರೀಕ್ಷೆಯನ್ನು ಬರೆಯುತ್ತಲೇ ಬಂದಿದ್ದರು ನೂರುದ್ದೀನ್.