ಫೇಮಸ್ ರಿಯಾಲಿಟಿ ಶೋಗಳ ಪೈಕಿ ಬಿಗ್ ಬಾಸ್ ಮುಂಚೂಣಿ ಸ್ಥಾನವನ್ನ ಪಡೆದುಕೊಂಡಿದೆ. ಎಲ್ಲ ಭಾಷೆಗಳಲ್ಲೂ ಪ್ರಸಾರವಾಗುವ ಈ ಶೋಗೆ ಅಭಿಮಾನಿ ಬಳಗ ಸಿಕ್ಕಾಪಟ್ಟೆ ಇದೆ.
ಆದರೆ ಈ ಅಭಿಮಾನ ಎಷ್ಟರ ಮಟ್ಟಿಗೆ ಅಂದರೆ ವ್ಯಕ್ತಿಯೊಬ್ಬ ತನ್ನ ಮೆದುಳಿನ ಶಸ್ತ್ರಚಿಕಿತ್ಸೆ ವೇಳೆ ಬಿಗ್ಬಾಸ್ ಶೋ ವೀಕ್ಷಿಸಿದ ಘಟನೆಯೊಂದು ನಡೆದಿದೆ.
ಆಂಧ್ರಪ್ರದೇಶದ ಗುಂಟೂರಿನಲ್ಲಿ 33 ವರ್ಷದ ವರಪ್ರಸಾದ್ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ. ಸಾಮಾನ್ಯವಾಗಿ ಸೂಕ್ಷ್ಮ ಚಿಕಿತ್ಸೆಗಳನ್ನ ಕೊಡುವಾಗ ಪ್ರಜ್ಞೆ ತಪ್ಪಿಸೋದು ಸಹಜ.
ಆದರೆ ಈ ಶಸ್ತ್ರಚಿಕಿತ್ಸೆ ವೇಳೆ ವ್ಯಕ್ತಿ ಎಚ್ಚರವಾಗಿರಬೇಕಾಗುತ್ತದೆ. ಹೀಗಾಗಿ ಬಿಗ್ ಬಾಸ್ ಶೋ ನೋಡುತ್ತ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾನೆ. ಇದು ಸಾಲದು ಎಂಬಂತೆ ಶಸ್ತ್ರಚಿಕಿತ್ಸೆ ಮುಗಿದ ಬಳಿಕ ಅವತಾರ್ ಸಿನಿಮಾವನ್ನೂ ನೋಡಿದ್ದಾನೆ.
ಈ ಹಿಂದೆ ಮಹಿಳೆಯೊಬ್ಬರು ಮೆದುಳಿನಲ್ಲಿರುವ ಗಡ್ಡೆ ತೆಗೆಯುವ ಆಪರೇಷನ್ ಮಾಡುತ್ತಿದ್ದ ವೇಳೆ ವಾಯೋಲಿನ್ ನುಡಿಸುವ ಮೂಲಕ ಸುದ್ದಿಯಾಗಿದ್ದರು.