ಲಾಕ್ಡೌನ್ನಿಂದಾಗಿ ಬಂದ್ ಆಗಿದ್ದ ಅಹಮದಾಬಾದ್ನ ಪ್ರಸಿದ್ಧ ಶ್ರೀ ಸ್ವಾಮಿನಾರಾಯಣ ಮಂದಿರ ಬರೋಬ್ಬರಿ 7 ತಿಂಗಳ ಬಳಿಕ ಭಕ್ತರ ದರ್ಶನಕ್ಕೆ ಅನುವು ನೀಡಿದೆ. ಹಾಗೂ ಸುಮಾರು 3000 ಕೆಜಿ ಸೇಬುಗಳನ್ನ ಭಕ್ತರ ಪ್ರದರ್ಶನಕ್ಕೆ ಇಡಲಾಗಿದೆ.
ಪ್ರದರ್ಶನಕ್ಕೆ ಇರಿಸಿರೋ ಸೇಬು ಹಣ್ಣುಗಳು ಕೆಂಪು ಹಸಿರು ಹಾಗೂ ಬಂಗಾರ ಬಣ್ಣಗಳನ್ನ ಹೊಂದಿವೆ, ಈ ಹಣ್ಣುಗಳನ್ನ ಪೂಜೆಯ ಬಳಿಕ ಕೊರೊನಾ ರೋಗಿಗಳಿಗೆ ವಿತರಿಸಿದ್ದೇವೆ ಅಂತಾ ದೇಗುಲದ ಆಡಳಿತ ಮಂಡಳಿ ತಿಳಿಸಿದೆ.
ಕೊರೊನಾದಿಂದಾಗಿ ಮಾರ್ಚ್ ಕೊನೆಯ ವಾರದಲ್ಲಿ ರಾಷ್ಟ್ರವ್ಯಾಪಿ ಲಾಕ್ಡೌನ್ ಜಾರಿಯಾಗಿದ್ದ ವೇಳೆ ದೇವಸ್ಥಾನದ ಬಾಗಿಲನ್ನ ಬಂದ್ ಮಾಡಲಾಗಿತ್ತು. ಇದಾದ ಬಳಿಕ ಅನೇಕ ದೇವಾಲಯಗಳು ಓಪನ್ ಆಗಿತ್ತು. ಇದೀಗ ನವರಾತ್ರಿ ಪ್ರಯುಕ್ತ ಶ್ರೀ ಸ್ವಾಮಿ ನಾರಾಯಣ ದೇವಾಲಯವೂ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ.