alex Certify 3 ವರ್ಷದ ಮಗಳಿಗೆ ಅಮಾನುಷವಾಗಿ ಥಳಿಸಿದ ತಾಯಿ ಹೇಳಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3 ವರ್ಷದ ಮಗಳಿಗೆ ಅಮಾನುಷವಾಗಿ ಥಳಿಸಿದ ತಾಯಿ ಹೇಳಿದ್ದೇನು…?

ಹರಿದ್ವಾರದಲ್ಲಿ ಮೂರು ವರ್ಷದ ಮುಗ್ಧ ಬಾಲಕಿಯನ್ನು ಕ್ರೂರವಾಗಿ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೈರಲ್ ಆದ ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಸುಮಾರು ಮೂರು ವರ್ಷದ ಮುಗ್ಧ ಮಗುವಿನ ಮೇಲೆ ಹಲ್ಲೆ ನಡೆಸಿದ್ದಾಳೆ.

ಮಗುವಿಗೆ ಹೊಡೆದ ಮಹಿಳೆ ಬೇರೆ ಯಾರೂ ಅಲ್ಲ, ತಾಯಿ. ಈ ವೈರಲ್ ವಿಡಿಯೋ ಜ್ವಾಲಾಪುರ ಕೊಟ್ವಾಲಿ ಪ್ರದೇಶದ ಸುಭಾಷ್ ನಗರದ್ದು ಎನ್ನಲಾಗಿದೆ.

ವಿಡಿಯೋದಲ್ಲಿ ತಾಯಿ, ಮಗುವಿನ ಕೈ ಹಿಡಿದು ತಿರುಗಿಸುತ್ತಿದ್ದಾಳೆ. ಮಗು ಅಳ್ತಿದೆ. ಅಳು ನಿಲ್ಲಿಸುವಂತೆ ತಾಯಿ ಮಗುವಿಗೆ ಹೊಡೆಯುತ್ತಾಳೆ. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ವಿಡಿಯೋ ವೈರಲ್ ಆಗ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆ ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ಮಹಿಳೆ, ತನ್ನದೇನು ತಪ್ಪಿಲ್ಲ ಎಂದಿದ್ದಾಳೆ. ಮಗಳ ಕೈ ಮುರಿದಿತ್ತು. ಅನೇಕ ಔಷಧಿ ಮಾಡಿದ್ದೇವೆ. ಕಡಿಮೆಯಾಗಿಲ್ಲ. ಹಾಗಾಗಿ ಪ್ರತಿ ದಿನ ಮಾಲಿಶ್ ಮಾಡುತ್ತೇನೆ. ಮಾಲಿಶ್ ಮಾಡಲು ಮಗಳು ಕೊಡ್ತಿರಲಿಲ್ಲ. ಹಾಗಾಗಿ ಸ್ವಲ್ಪ ಹೊಡೆದಿದ್ದು ನಿಜ. ಆದ್ರೆ ವಿಡಿಯೋದಲ್ಲಿ ತಪ್ಪಾಗಿ ತೋರಿಸಲಾಗಿದೆ ಎಂದಿದ್ದಾಳೆ. ಪ್ರಕರಣದ ತನಿಖೆ ಮುಂದುವರೆದಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...