ಡೆಹರಾಡೂನ್: ಮದುವೆ ಸಮಾರಂಭವೊಂದರಿಂದ 28 ಕ್ಕೂ ಹೆಚ್ಚು ಜನರಲ್ಲಿ ಕೋವಿಡ್ ಕಾಣಿಸಿಕೊಂಡಿದ್ದು, ಉತ್ತರಾಖಂಡದಲ್ಲಿ ಕೋವಿಡ್ 19 ಎರಡನೇ ಅಲೆಯ ಆತಂಕ ಹುಟ್ಟಿಸಿದೆ.
ಉತ್ತರಾಖಂಡ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿರುವ ಡೊಯ್ವಾಲಾ ಎಂಬ ನಗರದಲ್ಲಿ ಡಿ.10 ರಂದು ನಡೆದ ಮಾಜಿ ಮಂಡಲ ಪ್ರಧಾನರ ಕುಟುಂಬದ ಮದುವೆಯಲ್ಲಿ ಭಾಗವಹಿಸಿದ ಹಲವರನ್ನು ಪರೀಕ್ಷಿಸಿದಾಗ ಪಾಸಿಟಿವ್ ಬಂದಿದ್ದು, ಇಬ್ಬರು ಹಿರಿಯರು ಮೃತಪಟ್ಟಿದ್ದಾರೆ.
ಮದುವೆಯಲ್ಲಿ ಭಾಗವಹಿಸಿದ ವ್ಯಕ್ತಿಯೊಬ್ಬರಿಗೆ ಕೋವಿಡ್ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷಿಸಿಕೊಂಡಿದ್ದರು. ಅವರಿಗೆ ಪಾಸಿಟಿವ್ ಬಂದಿದೆ. ನಂತರ ವರನಿಗೂ ಕೋವಿಡ್ ಬಂದಿದ್ದು, ಆತನ 90 ವರ್ಷದ ಅಜ್ಜಿ ಸೇರಿ ಹಲವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸಮಾರಂಭದಲ್ಲಿ ಭಾಗವಹಿಸಿದ ಕನಿಷ್ಠ 100 ಜನರನ್ನು ಪರೀಕ್ಷೆ ಮಾಡುವ ಗುರಿ ಹೊಂದಿದ್ದೇವೆ ಎನ್ನುತ್ತಾರೆ ಹೆಚ್ಚುವರಿ ಮುಖ್ಯ ಆರೋಗ್ಯ ಅಧಿಕಾರಿ ಡಾ.ಆರ್.ಕೆ. ದೀಕ್ಷಿತ್.