ಕೊರೊನಾ ಸಂಕಷ್ಟದಲ್ಲಿ ಶಾಲೆ-ಕಾಲೇಜುಗಳ ಬಾಗಿಲು ಮುಚ್ಚಿದೆ. ಆದ್ರೆ ಅನೇಕ ಶಾಲೆಗಳಲ್ಲಿ ಆನ್ಲೈನ್ ಕ್ಲಾಸ್ ಗಳು ನಡೆಯುತ್ತಿವೆ. ಹಳ್ಳಿಯಿಂದ ದೆಹಲಿಯವರೆಗೆ ಆನ್ಲೈನ್ ಕ್ಲಾಸ್ ಗಳನ್ನು ನಡೆಸಲಾಗ್ತಿದೆ. ಆದ್ರೆ ಇದ್ರಿಂದ ಮಕ್ಕಳು ಏನೆಲ್ಲ ಸಮಸ್ಯೆ ಎದುರಿಸುತ್ತಿದ್ದಾರೆಂಬ ಬಗ್ಗೆ ಸಮೀಕ್ಷೆ ನಡೆಸುವಂತೆ ಕ್ಷಣ ಸಚಿವಾಲಯವು ಎನ್‌ಸಿಇಆರ್‌ಟಿಗೆ ನಿರ್ದೇಶನ ನೀಡಿತ್ತು.
ಸಮೀಕ್ಷೆ ನಂತ್ರ ಮಹತ್ವದ ವಿಷ್ಯ ಹೊರಬಿದ್ದಿದೆ. ಕಲಿಕೆಯ ಪರ್ಯಾಯ ಮಾರ್ಗಗಳು ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸುವುದಿಲ್ಲ ಎಂಬುದು ಗೊತ್ತಾಗಿದೆ. ಆನ್ಲೈನ್ ಶಿಕ್ಷಣ ಎಲ್ಲ ವಿದ್ಯಾರ್ಥಿಗಳಿಗೆ ಒಂದೇ ರೀತಿಯ ಶಿಕ್ಷಣ ನೀಡ್ತಿಲ್ಲ. ಇದಕ್ಕೆ ಅನೇಕ ಕಾರಣವಿದೆ ಎಂಬುದು ಸಮೀಕ್ಷೆಯಿಂದ ಗೊತ್ತಾಗಿದೆ.
ಸಮೀಕ್ಷೆ ಪ್ರಕಾರ ಶೇಕಡಾ 50ರಷ್ಟು ವಿದ್ಯಾರ್ಥಿಗಳು ಲಾಕ್‌ಡೌನ್ ಸಮಯದಲ್ಲಿ ಮತ್ತು ನಂತರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಶೇಕಡಾ 28 ವಿದ್ಯಾರ್ಥಿಗಳಿಗೆ ವಿದ್ಯುತ್ ಸಮಸ್ಯೆ ಕಾಡ್ತಿದೆ. ಇದ್ರಿಂದ ಪ್ರತಿ ದಿನ ಆನ್ಲೈನ್ ಕ್ಲಾಸ್ ತೆಗೆದುಕೊಳ್ಳಲು ಸಾಧ್ಯವಾಗ್ತಿಲ್ಲ. ಶೇಕಡಾ 27ರಷ್ಟು ವಿದ್ಯಾರ್ಥಿಗಳಿಗೆ ಡಿವೈಸ್ ಕೊರತೆಯಿದೆ. ಆನ್ಲೈನ್ ಶಿಕ್ಷಣಕ್ಕೆ ಇಂಟರ್ನೆಟ್ ಸೌಲಭ್ಯ, ಮೊಬೈಲ್, ಲ್ಯಾಪ್ ಟಾಪ್ ಸೇರಿದಂತೆ ಅನೇಕ ಡಿವೈಸ್ ಅವಶ್ಯಕತೆಯಿದೆ. ಆದ್ರೆ ಎಲ್ಲ ವಿದ್ಯಾರ್ಥಿಗಳಿಗೂ ಇದು ಸಿಗ್ತಿಲ್ಲ.
ಸಮೀಕ್ಷೆ ಪ್ರಕಾರ ಕಳಪೆ ಇಂಟರ್ನೆಟ್, ವಿದ್ಯುತ್ ಸಮಸ್ಯೆಯಿಂದ ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣ ಸಿಗ್ತಿಲ್ಲ. ಇದಲ್ಲದೆ ಶಿಕ್ಷಕರು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅನೇಕ ಶಿಕ್ಷಕರಿಗೆ ಆನ್ಲೈನ್ ಬೋಧನಾ ವಿಧಾನ ತಿಳಿದಿಲ್ಲ. ಇನ್ನು ಅರ್ಧದಷ್ಟು ವಿದ್ಯಾರ್ಥಿಗಳ ಬಳಿ ಪುಸ್ತಕವಿಲ್ಲ. ಎನ್‌ಸಿಇಆರ್‌ಟಿ ಮತ್ತು DIKSHA ದಲ್ಲಿ ಆನ್ಲೈನ್ ಪಠ್ಯಪುಸ್ತಕ ಲಭ್ಯವಿದೆ. ಆದ್ರೆ ಇದ್ರ ಬಗ್ಗೆ ವಿದ್ಯಾರ್ಥಿಗಳಿಗೆ ಸರಿಯಾದ ಮಾಹಿತಿಯಿಲ್ಲ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಲಕರಣೆಗಳ ಕೊರತೆ, ಆನ್‌ಲೈನ್ ಬೋಧನೆ, ಕಲಿಕೆಯ ವಿಧಾನದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ದೃಷ್ಟಿಕೋನ ಕೊರತೆ ಎಲ್ಲವೂ ಕಾಡ್ತಿದೆ.