
ಇತ್ತೀಚಿನ ದಿನಗಳಲ್ಲಿ ತಲವಾರಿನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಖಯಾಲಿ ಹೆಚ್ಚಾಗುತ್ತಿದೆ.
ಮಹಾರಾಷ್ಟ್ರದ ನಾಗಪುರದಲ್ಲಿ ಈ ರೋಗಕ್ಕೆ ಪೊಲೀಸರು ಮದ್ದರೆದಿದ್ದಾರೆ.
ಅಮನ್ ವಕೀಲ್ ಉಫೇದ್ ಎಂಬಾತ ಕತ್ತಿಯಲ್ಲಿ ಕೇಕ್ ಕತ್ತರಿಸುವ ಮೂಲಕ ಜನ್ಮದಿನ ಆಚರಿಸಿಕೊಳ್ಳುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಕತ್ತಿಯ ಸಮೇತ ಆತನನ್ನು ಬಂಧಿಸಿದ್ದಾರೆ.
ಅಷ್ಟೇ ಅಲ್ಲದೆ, 27 ವರ್ಷದ ಆತ ಕತ್ತಿಯನ್ನು ಬಳಸಿ ಅಪರಾಧ ಕೃತ್ಯ ಎಸಗಲೂ ಸಂಚು ರೂಪಿಸಿದ್ದ ಎಂಬ ಮಾಹಿತಿಯೂ ಇತ್ತು. ಹೀಗಾಗಿ ಶಸ್ತ್ರಾಸ್ತ್ರಗಳ ಕಾಯ್ದೆ ಮತ್ತು ಮಹಾರಾಷ್ಟ್ರ ಪೊಲೀಸ್ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.