ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಜಗತ್ತಿನಾದ್ಯಂತ ಸಾಕಷ್ಟು ಜನರಿಗೆ ಜೀವನೋಪಾಯ ಕಷ್ಟವಾಗಿದೆ. ಆದರೂ ಸಹ ಇದೇ ಖಾಲಿ ಸಮಯದಲ್ಲಿ ಜನರ ಕ್ರಿಯಾಶೀಲತೆಯೂ ಸಹ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕಾಣಿಸಿಕೊಳ್ಳುತ್ತಿದೆ.
ಕಮಲದ ಹೂವಿನ ಕಾಂಡದಿಂದ ನೂಲನ್ನು ಹೊರತೆಗೆಯುವ ಮಣಿಪುರದ ಮಹಿಳೆಯೊಬ್ಬರ ವಿಶಿಷ್ಟ ತಂತ್ರಗಾರಿಕೆಯೊಂದು ಗಮನ ಸೆಳೆಯುತ್ತಿದೆ. ಮಣಿಪುರದ 27 ವರ್ಷದ ಬೈಜಯಶಾಂತಿ ಟ್ರಂಗ್‌ಬ್ರಾಮ್ ತಮ್ಮ ಗ್ರಾಮಸ್ಥರಿಗೆ ಈ ಸಂಕಷ್ಟದ ಸಮಯದಲ್ಲಿ ಆದಾಯ ಬರುವಂತೆ ಮಾಡಲು ಈ ರೀತಿ ಮಾಡಿದ್ದಾರೆ.
“ನನಗೆ ಈ ಐಡಿಯಾ ಹಿರಿಯರಿಂದ ಹೊಳೆದಿದೆ. ನಾನು ಈ ವಿಚಾರವಾಗಿ ಸಾಕಷ್ಟು ಸಂಶೋಧನೆ ಮಾಡಿದ್ದು, ನನ್ನದೇ ಸಾಮರ್ಥ್ಯದಿಂದ ಕಮಲದ ನೂಲುಗಳನ್ನು ತಯಾರಿಸಿದ್ದೇನೆ. ಇದಕ್ಕೂ ಮೊದಲು ನಾನು ಕಮಲದಿಂದ ಚಹಾವನ್ನು ಮಾಡಲು ಯತ್ನಿಸಿದ್ದೆ” ಎಂದು ಟೊಂಗ್‌ಬ್ರಮ್ ಹೇಳಿದ್ದಾರೆ.
ಕಮಲದ ಚಹಾ ತಯಾರಿಸಲು ಕೋಲ್ಕತ್ತಾದಿಂದ ಪರಿಕರಗಳನ್ನು ತರಿಸಿಕೊಳ್ಳಬೇಕಿದ್ದು, ಕೋವಿಡ್-19 ಲಾಕ್‌ಡೌನ್ ಕಾರಣದಿಂದ ಅದು ವಿಳಂಬವಾಗಿದೆ ಎನ್ನುತ್ತಾರೆ ಟೋಂಗ್‌ಬ್ರಮ್. ತಮ್ಮ ಈ ಹೊಸ ಸ್ಟಾರ್ಟ್ ಅಪ್‌ಗೆ ಮಣಿಪುರ ಸರ್ಕಾರದಿಂದ ಆರ್ಥಿಕ ನೆರವು ಸಿಗುವ ಆಶಯವನ್ನು ಇವರು ಹೊಂದಿದ್ದಾರೆ.