alex Certify ಮೊಬೈಲ್‌ ಆಪ್‌ ʼಬ್ಯಾನ್ʼ‌ ಆಗಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಕೇಂದ್ರ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್‌ ಆಪ್‌ ʼಬ್ಯಾನ್ʼ‌ ಆಗಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಕೇಂದ್ರ ಸಚಿವ

ಕಳೆದ ವರ್ಷ ಜೂನ್​ನಿಂದ ಇಲ್ಲಿಯವರೆಗೆ 266 ಮೊಬೈಲ್​ ಅಪ್ಲಿಕೇಶನ್​ಗಳನ್ನ ಭಾರತದಲ್ಲಿ ನಿಷೇಧಿಸಲಾಗಿದೆ ಎಂದು ಲೋಕಸಭೆಗೆ ಮಂಗಳವಾರ ಮಾಹಿತಿ ನೀಡಲಾಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿಶನ್​ ರೆಡ್ಡಿ, ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಜನರಿಂದ ನಿಷೇಧಿತ ಅಪ್ಲಿಕೇಶನ್​ಗಳ ಮೂಲಕ  ಮಾಹಿತಿಗಳನ್ನ ಕದಿಯಲಾಗುತ್ತಿದೆ. ಮಾತ್ರವಲ್ಲದೇ ಈ ಮೂಲಕ ಭಾರತದ ಅಖಂಡತೆ , ಸಾರ್ವಭೌಮತೆಗೆ ಧಕ್ಕೆ ಉಂಟಾಗುತ್ತಿದೆ. ಭಾರತ, ಭಾರತದ ರಕ್ಷಣೆ,  ರಾಜ್ಯಗಳ ರಕ್ಷಣೆಯ ಜೊತೆ ಜೊತೆಗೆ ಸಾರ್ವಜನಿಕರ ಹಿತಾಸಕ್ತಿಗಳನ್ನ ಗಮನದಲ್ಲಿ ಇಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ರು.

ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ರಾಷ್ಟ್ರೀಯ ಭದ್ರತಾ ವಿಷಯಗಳ ಬಗೆಗಿನ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್​ 69 ಎ ನಿಬಂಧನೆಗಳ ಅಡಿಯಲ್ಲಿ ಜೂನ್​​ 2020ರಿಂದ 266 ಮೊಬೈಲ್​ ಅಪ್ಲಿಕೇಶನ್​ಗಳನ್ನ ನಿರ್ಬಂಧಿಸಿದೆ ಎಂದು ಹೇಳಿದ್ರು.

ಅಪ್ಲಿಕೇಶನ್​ಗಳು ಯಾವ ದೇಶಕ್ಕೆ ಸೇರಿದ್ದು ಅನ್ನೋದ್ರ ಬಗ್ಗೆ ಲೋಕಸಭೆಯಲ್ಲಿ ಸಚಿವರು ಉಲ್ಲೇಖಿಸದೇ ಇದ್ದರೂ ಸಹ, ಲಡಾಖ್​ ಘರ್ಷಣೆ ಬಳಿಕ ಬ್ಯಾನ್​ ಆದ ಎಲ್ಲಾ ಅಪ್ಲಿಕೇಶನ್​ಗಳು ಚೀನಾ ಮೂಲದವು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

ನ್ಯಾಷನಲ್​ ಕ್ರೈಮ್​ ಬ್ಯುರೋ ನೀಡಿರುವ ಮಾಹಿತಿ ಪ್ರಕಾರ 2017ರಲ್ಲಿ 3466 ಆನ್​ಲೈನ್​ ವಂಚನೆ ಪ್ರಕರಣಗಳು ದಾಖಲಾಗಿವೆ. ಅದೇ 2018ರಲ್ಲಿ 3353 ಹಾಗೂ 2019ರಲ್ಲಿ 6233 ಕೇಸ್​ಗಳು ದಾಖಲಾಗಿವೆ.

ಸಧ್ಯಕ್ಕಿರುವ ಮಾಹಿತಿಯ ಪ್ರಕಾರ 2017ರಲ್ಲಿ ಆನ್​ಲೈನ್​ ವಂಚನೆ ಪ್ರಕರಣದಲ್ಲಿ 1971 ಮಂದಿ ಬಂಧನವಾಗಿದ್ದರೆ, 2018ರಲ್ಲಿ 1778 ಹಾಗೂ 2019ರಲ್ಲಿ 2542 ಮಂದಿ ಜೈಲು ಪಾಲಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...