ಆಂಧ್ರಪ್ರದೇಶದಲ್ಲಿ ಪ್ರೌಢಶಾಲೆಗಳು ಪುನಾರಂಭಗೊಂಡ ಮೂರೇ ದಿನಕ್ಕೆ 262 ವಿದ್ಯಾರ್ಥಿಗಳು ಹಾಗೂ 160 ಶಿಕ್ಷಕರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ನವೆಂಬರ್ 2ನೇ ತಾರೀಖಿನಿಂದ 9 ಹಾಗೂ 10ನೇ ವಿದ್ಯಾರ್ಥಿಗಳಿಗೆ ಶಾಲೆ ಪುನಾರಂಭಗೊಂಡಿತ್ತು.
ರಾಜ್ಯದಲ್ಲಿ ಬುಧವಾರ ಸುಮಾರು 4 ಲಕ್ಷ ಮಂದಿ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದಾರೆ. ಇದರಲ್ಲಿ 262 ಮಂದಿಗೆ ಕರೊನಾ ಪಾಸಿಟಿವ್ ವರದಿಯಾಗಿದೆ. ಇದು 0.1 ಪ್ರತಿಶತ ಕೂಡ ಅಲ್ಲ . ಅಲ್ಲದೇ ಈ ಮಕ್ಕಳಿಗೆ ಶಾಲೆಯಿಂದಲೇ ಸೋಂಕು ತಗುಲಿದೆ ಅನ್ನೋದರ ಬಗ್ಗೆಯೂ ಸ್ಪಷ್ಟ ಮಾಹಿತಿ ಇಲ್ಲ. ನಾವು ಪ್ರತಿ ತರಗತಿಯಲ್ಲಿ ಕೇವಲ 15 ವಿದ್ಯಾರ್ಥಿಗಳನ್ನ ಕೂರಿಸಿ ಪಾಠ ಮಾಡಿಸುತ್ತಿದ್ದೇವೆ ಅಂತಾ ಆಂಧ್ರ ಪ್ರದೇಶ ಶಿಕ್ಷಣ ಇಲಾಖೆ ಹೇಳಿದೆ.
ಮೂಲಗಳ ಪ್ರಕಾರ, ಆಂಧ್ರಪ್ರದೇಶದಲ್ಲಿ 9.75 ಲಕ್ಷ ಮಕ್ಕಳು 9 ಹಾಗೂ 10ನೇ ತರಗತಿಗೆ ದಾಖಲಾಗಿದ್ದಾರೆ. ಆದರೆ ಇದರಲ್ಲಿ 3.93 ಲಕ್ಷ ಮಕ್ಕಳು ಮಾತ್ರ ಶಾಲೆಗೆ ಬಂದಿದ್ದಾರೆ. ಇನ್ನು ರಾಜ್ಯದಲ್ಲಿ 1.11 ಲಕ್ಷ ಶಿಕ್ಷಕರಲ್ಲಿ 99,000 ಶಿಕ್ಷಕರು ಸೇವೆಗೆ ಹಾಜರಾಗಿದ್ದಾರೆ ಅಂತಾ ತಿಳಿದು ಬಂದಿದೆ.
ಇನ್ನು ನವೆಂಬರ್ 23 ರಿಂದ 6,7 ಹಾಗೂ 8ನೇ ತರಗತಿ ಆರಂಭ ಮಾಡಲು ನಿರ್ಧರಿಸಲಾಗಿದೆ. ಅಲ್ಲದೇ 1, 2, 3, 4 ಹಾಗೂ 5 ನೇ ತರಗತಿಗಳು ಡಿಸೆಂಬರ್ 14 ರಿಂದ ಆರಂಭಗೊಳ್ಳಲಿವೆ ಅಂತಾ ಆಂಧ್ರ ಪ್ರದೇಶ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ .