ದೇಶದ ಅತ್ಯಂತ ಕಿರಿಯ ಪೈಲಟ್ ಎಂಬ ಹೆಗ್ಗಳಿಕೆಗೆ ಕಾಶ್ಮೀರದ 25 ವರ್ಷದ ಯುವತಿ ಆಯೇಷಾ ಅಜಿಜ್ ಪಾತ್ರರಾಗಿದ್ದಾರೆ. 2011ರಲ್ಲಿ 15 ವರ್ಷ ವಯಸ್ಸಿನವಳಾಗಿದ್ದಾಗ ವಾಯುಯಾನದ ಪರವಾನಗಿ ಪಡೆದುಕೊಂಡು ಕಿರಿಯ ವಿದ್ಯಾರ್ಥಿನಿ ಎಂಬ ಕೀರ್ತಿಗೆ ಕೂಡ ಇವರು ಪಾತ್ರರಾಗಿದ್ದರು. ರಷ್ಯಾದ ಸೊಕೊಲ್ನಲ್ಲಿ ಮಿಗ್ 29 ಚಾಲನೆಯ ತರಬೇತಿ ಪಡೆದುಕೊಂಡಿದ್ದಾರೆ.
ಬಾಂಬೆ ಫ್ಲೈಯಿಂಗ್ ಕ್ಲಬ್ನಿಂದ ವಾಯುಯಾನದ ಪದವಿ ಪಡೆದಿರುವ ಆಯೇಷಾ 2017ರಲ್ಲಿ ವಾಣಿಜ್ಯ ಪರವಾನಗಿಯನ್ನೂ ಪಡೆದುಕೊಂಡಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಆಯೇಷಾ, ಕಾಶ್ಮೀರದ ಮಹಿಳೆಯರು ಕ್ರಮೇಣವಾಗಿ ಪ್ರಗತಿಯನ್ನ ಸಾಧಿಸುತ್ತಿದ್ದಾರೆ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಕಳೆದ ಕೆಲ ವರ್ಷಗಳಿಂದ ಕಾಶ್ಮೀರಿ ಸ್ತ್ರೀಯರು ಸಾಧನೆಯ ಪಥದಲ್ಲಿ ಸಾಗುತ್ತಿದ್ದಾರೆ ಎಂದು ಹೇಳಿದ್ರು.
ಕಾಶ್ಮೀರಿ ಮಹಿಳೆಯರು ಒಳ್ಳೆಯ ದಿಕ್ಕಿನಲ್ಲಿ ಸಾಗುತ್ತಿದ್ದಾರೆ ಎಂದು ನನಗನಿಸುತ್ತಿದೆ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಂತೂ ಕಾಶ್ಮೀರಿ ಮಹಿಳೆಯರು ಒಳ್ಳೆಯ ಸಾಧನೆಯನ್ನೇ ಮಾಡ್ತಿದ್ದಾರೆ. ಬಹುತೇಕ ಕಾಶ್ಮೀರಿ ಮಹಿಳೆಯರು ಪದವಿ ಹಾಗೂ ಡಾಕ್ಟರೇಟ್ ಪದವಿ ಪಡೆದುಕೊಳ್ತಿದ್ದಾರೆ ಎಂದು ಹೇಳಿದ್ರು.
ನನಗೆ ಚಿಕ್ಕನಿಂದಲೂ ಪ್ರಯಾಣ ಮಾಡೋದು ಅಂದ್ರೆ ತುಂಬಾನೇ ಇಷ್ಟ. ಇದೇ ಕಾರಣಕ್ಕೆ ನಾನು ಈ ಕ್ಷೇತ್ರವನ್ನ ಆಯ್ಕೆ ಮಾಡಿಕೊಂಡೆ. ಇದು ಆಫೀಸಿನಲ್ಲಿ ಕೂತು 9 ರಿಂದ 5 ಗಂಟೆಗಳವರೆಗೆ ಕೆಲಸ ಮಾಡಿದಂತಲ್ಲ. ಇಲ್ಲಿ ಕೆಲಸ ಮಾಡಲು ಒಂದೇ ವಿಧಾನ ಬಳಸೋಕೆ ಆಗಲ್ಲ. ನಾವು ಹೊಸ ಜಾಗ, ಎಲ್ಲಾ ಮಾದರಿಯ ಹವಾಮಾನ ಹಾಗೂ ಹೊಸ ಜನರನ್ನ ಎದುರಿಸಲು ತಯಾರಿರಬೇಕು ಎಂದು ಹೇಳಿದ್ರು.